ಎಚ್.ವಿಶ್ವನಾಥ್ ತಂಗಿಯ ಮೊಮ್ಮಗ ಅಪಘಾತದಿಂದ ಸಾವು
ಮೈಸೂರು, ಜುಲೈ 13: ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ತಂಗಿಯ ಮೊಮ್ಮಗ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
Recommended Video
C T ರವಿಗೂ ತಗುಲಿದ ಕೊರೊನ | Oneindia kannada
ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ತಂಗಿ ಶಾರದಾ ಅವರ ಮೊಮ್ಮಗ, ಕೆ.ಆರ್.ಮೊಹಲ್ಲಾದ ಹೊಸ ಬಂಡಿಕೇರಿಯ ನಿವಾಸಿ ಕಾರ್ತಿಕ್ (21) ಅಪಘಾತದಲ್ಲಿ ಸಾವನ್ನಪ್ಪಿದವರು.

ಇವರು ಕಳೆದ ವಾರ ಕುವೆಂಪುನಗರದ ಬಳಿ ಬೈಕಿನಲ್ಲಿ ಹೋಗುತ್ತಿರುವಾಗ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದಾರೆ.
ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications