Breaking; ಮೈಸೂರಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆ
ಮೈಸೂರು, ಡಿಸೆಂಬರ್ 23; ಮೈಸೂರಿನಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಓಮಿಕ್ರಾನ್ ಆತಂಕ ಶುರುವಾಗಿದೆ. ನಗರದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.
9 ವರ್ಷದ ಹೆಣ್ಣು ಮಗುವಿನಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಡಿಸೆಂಬರ್ 19ರಂದು ಪೋಷಕರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಗುವಿನಲ್ಲಿ ಓಮಿಕ್ರಾನ್ ಸೋಂಕು ಕಂಡುಬಂದಿದ್ದು, ಮಗುವಿನ ಪೋಷಕರಿಗೆ ಓಮಿಕ್ರಾನ್ ನೆಗೆಟಿವ್ ಬಂದಿದೆ.
"ಡಿಸೆಂಬರ್ 19ರಂದು ರಕ್ತ ಸ್ಯಾಂಪಲ್ ಪಡೆಯಲಾಗಿತ್ತು. ಇದೀಗ ಮಗುವಿಗೆ ಓಮಿಕ್ರಾನ್ ಪಾಸಿಟಿವ್ ಧೃಡವಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯಿಂದ ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ" ಎಂದು ಡಿಎಚ್‌ಓ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬೆಳಗ್ಗೆ ನೀಡಿದ ಮಾಹಿತಿಯಂತೆ ಭಾರತದಲ್ಲಿ 236 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ, 104 ಜನರು ಗುಣಮುಖಗೊಂಡಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣ; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯಂತೆ ಮಹಾರಾಷ್ಟ್ರದಲ್ಲಿ 65, ದೆಹಲಿಯಲ್ಲಿ 64, ತೆಲಂಗಾಣ 24, ರಾಜಸ್ಥಾನ 21, ಕರ್ನಾಟಕ 19, ಕೇರಳ 15, ಗುಜರಾತ್ 14, ಜಮ್ಮು ಮತ್ತು ಕಾಶ್ಮೀರದಲ್ಲಿ 3, ಆಂಧ್ರ ಪ್ರದೇಶ 2, ಓಡಿಶಾ 2.












Click it and Unblock the Notifications