ಮೈಸೂರಿನ ಪ್ರತಿಷ್ಠಿತ ಔಷಧ ಮಳಿಗೆಯಲ್ಲಿ ಬೆಂಕಿ
ಮೈಸೂರು, ಜೂನ್ 20: ಮೈಸೂರಿನಲ್ಲಿ ಔಷಧಿ ಮಳಿಗೆಯೊಂದರಲ್ಲಿ ಇಂದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ನಾಶವಾಗಿವೆ.
Recommended Video
ಗಂಗೂಲಿ ಕುಟುಂಬದ ಮೂವರಿಗೆ ಕೊರೊನ ಸೋಂಕು | Oneindia Kannada
ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರತಿಷ್ಠಿತ ಮೆಗಾ ಮೆಡಿಕಲ್ ಸ್ಟೋರ್ಸ್ ನಲ್ಲಿ ಇಂದು ಬೆಳಗ್ಗಿನ ಜಾವ ಬೆಂಕಿ ಹೊತ್ತಿಕೊಂಡಿದೆ. ಬಹೃತ್ ಮಹಡಿ ಕಟ್ಟಡದ ಔಷಧಿ ಮಳಿಗೆ ಇದಾಗಿದ್ದು, ಕ್ಷಣಕ್ಷಣಕ್ಕೂ ಬೆಂಕಿ ಕಟ್ಟಡವನ್ನು ಆವರಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಈ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ಪದಾರ್ಥಗಳು ಬೆಂಕಿಗಾಹುತಿಯಾಗಿವೆ.

ಎರಡು ಅಗ್ನಿ ಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕದಳ ಯಶಸ್ವಿಯಾಗಿದೆ.












Click it and Unblock the Notifications