ಮೈಸೂರು ದಸರಾ ಉದ್ಘಾಟನೆ ಮಾಡುವುದಿಲ್ಲ : ಕಡಿದಾಳ್ ಶಾಮಣ್ಣ

ಮೈಸೂರು, ಸೆ. 21: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶರನ್ನವರಾತ್ರಿಯ ಮೊದಲನೇ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ದಸರಾ ಉದ್ಘಾಟನೆ ಮಾಡುವಂತೆ ಬಂದ ಆಹ್ವಾನವನ್ನು ಸಮಾಜವಾದಿ ನಾಯಕ, ರೈತ ಕಡಿದಾಳ್ ಶಾಮಣ್ಣ ತಳ್ಳಿ ಹಾಕಿದ್ದಾರೆ.
ನಾಡಿನ ಪ್ರಗತಿಪರ ರೈತರೊಬ್ಬರು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡುತ್ತಾರೆ ಎಂದು ಸರ್ಕಾರ ಘೋಷಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಪ್ರಗತಿ ಪರ ರೈತ ಯಾರು ಎಂಬುದು ಇನ್ನೂ ನಿಷ್ಕರ್ಷೆಯಾಗಿಲ್ಲ, ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಮುಖಂಡ, ರೈತ ಕಡಿದಾಳ್ ಶಾಮಣ್ಣ ಅವರಿಗೆ ಫೋನ್ ಕರೆ ಮಾಡಿ ಆಹ್ವಾನ ನೀಡಿದ್ದರು. ಅದರೆ, ಆಹ್ವಾನವನ್ನು ಶಾಮಣ್ಣ ನಿರಾಕರಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು ರೈತರ ಸರಣಿ ಆತ್ಮಹತ್ಯೆ ಮುಂದುವರಿಯುತ್ತಿದೆ. ಇಂಥ ಸಂದರ್ಭದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನಾನು ಮಾಡುವುದಿಲ್ಲ ಎಂದು ಪ್ರಗತಿಪರ ರೈತ ಕಡಿದಾಳ್ ಶಾಮಣ್ಣ ಪ್ರತಿಕ್ರಿಯಿಸಿದ್ದಾರೆ.

Kadidal Shamanna

ರೈತರ ಆತ್ಮಹತ್ಯೆ ಮುಂದುವರೆಯುತ್ತಿರುವುದು ದು:ಖ ತಂದಿದೆ. ಬೇಕಾದರೆ ವಿಧಾನಸೌಧದ ಕಸ ಗುಡಿಸುತ್ತೇನೆ. ಆದರೆ ದಸರಾ ಉದ್ಘಾಟನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ರೈತರ ಅನುಮತಿ ಇಲ್ಲದೇ ರೈತರ ಜಮೀನು ವಶಪಡಿಸಿಕೊಳ್ಳಲು ನೋಡುತ್ತಿದೆ. ಆದರೆ ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಬಗೆಹರಿಸದೇ ಹಾಗೇ ಇಟ್ಟುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಉದ್ಘಾಟನೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಅಕ್ಟೋಬರ್ 14ರಿಂದ ಅ.23ರ ತನಕ ಸರಳ ದಸರಾ ಮಹೋತ್ಸವ ಜರುಗಲಿದೆ. ಅ. 23ರಂದು ವಿಜಯದಶಮಿಯ ದಿನ ದಸರಾ ಮೆರವಣಿಗೆ ನೆರವೇರಲಿದೆ.

ಸಿಎಂಗೆ ಆಹ್ವಾನ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ದಸರಾ ಮಹೋತ್ಸವಕ್ಕೆ ಅಧಿಕೃತ ಆಮಂತ್ರಣ ನೀಡಲಾಯಿತು.

ಬರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದಕಾರಣ, ಮಾನವೀಯತೆಯ ದೃಷ್ಠಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಲಾಭ-ನಷ್ಟಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೈಸೂರು ಅರಮನೆಯ ಆವರಣದಲ್ಲಿ ನಡೆಯಲಿರುವ ದಸರಾ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲೂ, ಕಲಾವಿದರಿಗೆ ರೈತರಿಂದ ಸನ್ಮಾನ ಮಾಡಲಾಗುವುದು. ಈ ಬಾರಿಯ ದಸರಾ ಸಂದರ್ಭದಲ್ಲಿ ರಾಜ್ಯದ ಹೊರಗಿನ ಕಲಾವಿದರಿಗೆ ಆಮಂತ್ರಣ ನೀಡುತ್ತಿಲ್ಲ. ಎಲ್ಲಾ ಕಾರ್ಯಕ್ರಮಗಳನ್ನೂ ಸಂಪೂರ್ಣವಾಗಿ ಸ್ಥಳೀಯ ಕಲಾವಿದರೇ ನಡೆಸಿಕೊಡಲಿದ್ದಾರೆ ಎಂದು ಸಚಿವರು ಹೇಳಿದರು.

ದಸರಾ ಸಂದರ್ಭದಲ್ಲಿ ಈ ಹಿಂದೆ, ಇಡೀ ಮೈಸೂರು ನಗರಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಿಜಯ ದಶಮಿಯ ದಿನದಂದು ದಸರಾ ಮೆರವಣಿಗೆ ಸಾಗುವ ರಸ್ತೆಗಳಿಗೆ ಮಾತ್ರ ದೀಪಾಲಂಕಾರ ಮಾಡಲಾಗುವುದು. ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಆ ದಿನ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+