ದಸರಾ ಟೆಂಡರ್ ವಾಪಸ್ ಪಡೆಯುವಂತೆ ಬೆದರಿಕೆ ಕರೆ

ಮೈಸೂರು, ಸೆ.1 : ಮೈಸೂರು ದಸರಾ ವಸ್ತು ಪ್ರದರ್ಶನದ ಸಬ್‌ಟೆಂಡರ್ ವಾಪಸ್ ಪಡೆಯುವಂತೆ ಗುತ್ತಿಗೆದಾರ ಮಂಜು ಅವರಿಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ. ಈ ಕುರಿತು ನಜಾರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆರದಿದೆ.

ಶನಿವಾರ ಮತ್ತು ಭಾನುವಾರ ಮಂಜು ಅವರಿಗೆ ಮುಂಬೈನಿಂದ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಟೆಂಡರ್ ವಾಪಸ್ ಪಡೆಯದಿದ್ದರೆ, ನಿಮ್ಮ ಮನೆಗೆ ಬಂದು ಗುಂಡು ಹಾರಿಸಿ ಕೊಲೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Mysore Dasara

ಕರೆ ಬಂದಿರುವ ನಂಬರ್‌, ಕಾಲ್‌ ರೆಕಾರ್ಡ್‌ ಮುಂತಾದ ಮಾಹಿತಿಯೊಡನೆ ಬೆದರಿಕೆ ಕರೆ ಬಗ್ಗೆ ಮಂಜು ನಜಾರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. 2.15 ಕೋಟಿ ರೂ. ವೆಚ್ಚದ ಟೆಂಡರ್ ವಾಪಸ್ ಪಡೆಯಿರಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಂಜು ತಿಳಿಸಿದ್ದಾರೆ. [ಮೈಸೂರು ಆನೆಗಳಿಗೆ ಭಾರ ಹೊರುವ ತರಬೇತಿ]

ಕಳೆದ ಹಲವಾರು ವರ್ಷಗಳಿಂದ ಮಂಜು ಅವರು ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ಪಡೆಯುತ್ತಿದ್ದರು. ಬಹುಶಃ ಟೆಂಡರ್ ನಮಗೆ ಬರುತ್ತಿಲ್ಲ ಎಂಬ ಹಿನ್ನಲೆಯಲ್ಲಿ ಬೇರೆ ಗುತ್ತಿಗೆದಾರರು ಈ ರೀತಿ ಬೆದರಿಕೆ ಕರೆ ಮಾಡಿಸಿದ್ದಾರೆ ಎಂದು ಶಂಕಿಸಲಾಗಿದ್ದು, ನಜರ್‌ಬಾದ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. [ಮೈಸೂರು ದಸರಾ ವೆಬ್‌ಸೈಟ್ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+