• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಅಪಘಾತದಲ್ಲಿ ಸಿಆರ್‌ಪಿಎಫ್ ಯೋಧ ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 5: ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸಿಆರ್‌ಪಿಎಫ್ ಯೋಧ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು-ಪಿರಿಯಾಪಟ್ಟಣ ಹೆದ್ದಾರಿಯ ಅರಸು ಕಲ್ಲಹಳ್ಳಿ ಬಳಿ ನಡೆದಿದೆ.

ಶುಕ್ರವಾರ ರಾತ್ರಿ ಈ ಅನಾಹುತ ಸಂಭವಿಸಿದ್ದು, ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಗೊರಳ್ಳಿಯ ನಾಗರಾಜಶೆಟ್ಟಿ ಅವರ ಪುತ್ರ ಅಣ್ಣಯ್ಯ ಶೆಟ್ಟಿ (35) ಮೃತಪಟ್ಟ ಯೋಧನಾಗಿದ್ದು, ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಯೋಧ ಅಣ್ಣಯ್ಯ ಶೆಟ್ಟಿ ಮಹಾರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್‌ನಲ್ಲಿ 14 ವರ್ಷಗಳಿಂದ ಸಿಆರ್‌ಪಿಎಫ್ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು.

ರಜೆ ಮೇಲೆ ಬಂದಿದ್ದ ಇವರು ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ತಾಲ್ಲೂಕಿನ ಕಲ್ಲಹಳ್ಳಿ ಗೇಟ್‌ನ ಹತ್ತಿರದಲ್ಲಿ ಬ್ರೇಕ್ ವಿಫಲಗೊಂಡು ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು.

English summary
CRPF soldier Annaiah Shetty dies in road accident near Kallahalli, Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X