ಮೈಸೂರಿನಲ್ಲಿ ಹೆಚ್ಚಿದ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಹವಾ

ಮೈಸೂರು, ಮೇ 2:ಪ್ರೇಮಿಗಳ ಹಾಟ್ ಸ್ಪಾಟ್ ಎಂದೇ ಕರೆಯಲ್ಪಡುವ ಮೈಸೂರು ಸದ್ಯ ಪ್ರಿ ವೆಡ್ಡಿಂಗ್ ಶೂಟ್ ನ ಹಾಟ್ ಸ್ಪಾಟ್ ಆಗಿದೆ. ಹೌದು, ವನ್ಯಸಿರಿ, ಪಾರಂಪರಿಕ ತಾಣದ ಟಚ್ ನೊಂದಿಗೆ ಪ್ರಿ ವೆಡ್ಡಿಂಗ್ (ವಿವಾಹ ಪೂರ್ವ ಫೋಟೋ) ಚಿತ್ರಣ ಹೆಚ್ಚಾಗಿದೆ.

ಮೈಸೂರು ಅರಮನೆ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಕೆಆರ್ಎಸ್ ಮೊದಲಾದ ಕಡೆಗಳಿಗೆ ಜೋಡಿಗಳನ್ನು ಕರೆದೊಯ್ದು ಫೋಟೊಗಳನ್ನು ಕ್ಲಿಕ್ಕಿಸುತ್ತಾರೆ.ಹೊಸಬಾಳಿಗೆ ಕಾಲಿಡಲು ಅಣಿಯಾಗಿರುವ ಜೋಡಿಗಳ ಕುಡಿನೋಟ, ಕಲರವ, ಮಧುರ ಕ್ಷಣ, ಚುಕುಬುಕು ಪಯಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು'ಚಿತ್ರ ವೈಭವ ಕಟ್ಟಿಕೊಡಲಾಗುತ್ತದೆ.

'ಪ್ರಿ ವೆಡ್ಡಿಂಗ್‌' ಫೋಟೊಗಳನ್ನು ತೆಗೆಸಿಕೊಳ್ಳಲು ನಾಡಿನ ವಿವಿಧಡೆಗಳಿಂದ ಜೋಡಿಗಳು ಇಲ್ಲಿಗೆ ಬರುತ್ತಾರೆ. ಈಗ ಮದುವೆ ಸುಗ್ಗಿಯಾಗಿದ್ದು, ಈ ರಂಗುಗುಂಗು ತುಸು ಜಾಸ್ತಿ ಇದೆ. ಇಳಿ ಸಂಜೆಯಲ್ಲಿ ಇಲ್ಲಿನ ವೈವಿಧ್ಯಮಯ, ವರ್ಣರಂಜಿತ ಫೋಟೋಗಳನ್ನು ತೆಗೆಯಬಹುದಾಗಿದ್ದು, ಶಿಲ್ಪಕಲೆ, ಕೊಳ, ದಿಬ್ಬ, ಗಿಡ ಮರಗಳು ಫೋಟೊಗಳಿಗೆ ಸಾಥ್‌ ನೀಡುತ್ತವೆ ಎಂದು ದಾಂಪತ್ಯಕ್ಕೆ ಈಚೆಗೆ ಕಾಲಿಟ್ಟ ವಿಶ್ವಾಸ್ ಹೇಳುತ್ತಾರೆ.

Couples Pre wedding photo-shoot trending in Mysuru

ಜೋಡಿಗಳಿಗೆ ಕಾರು, ಬೈಕು, ಗಿಟಾರ್‌, ಛತ್ರಿ, ಬಲೂನ್‌, ಮೊಬೈಲ್‌, ಟೋಪಿ ಮೊದಲಾದವು ಸಾಥ್‌ ನೀಡುತ್ತವೆ. ಹೆಚ್ಚಾಗಿ ಸೂರ್ಯಾಸ್ತ, ಮಂಜು, ಮುಂಜಾನೆ, ಮುಸ್ಸಂಜೆಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸುತ್ತಾರೆ. ಪ್ಯಾಕೇಜ್‌ಗೆ ತಕ್ಕಂತೆ 'ಬಿಲ್‌' ಇರುತ್ತದೆ. ಮಕ್ಕಳ ಜನ್ಮ ದಿನವನ್ನೂ (ಬರ್ತ್‌ ಡೇ) ಸೊಬಗಿನ ತಾಣಗಳಲ್ಲಿ ಆಚರಿಸುವ, ಫೋಟೊ ಶೂಟ್‌ ಮಾಡುವ ಪರಿಪಾಠ ಬೆಳೆಯುತ್ತಿದೆ.

Couples Pre wedding photo-shoot trending in Mysuru

ಛಾಯಾಗ್ರಾಹಕರೇ ತಾಣಗಳಿಗೆ ಕರೆದೊಯ್ಯುತ್ತಾರೆ. ಡ್ರೆಸ್‌, ಪೂರಕ ಸಾಮಗ್ರಿ ತರಲು ತಿಳಿಸುತ್ತಾರೆ. ಪ್ರಿ ವೆಡ್ಡಿಂಗ್‌ ಫೋಟೊ ಟ್ರೆಂಡ್‌ ಈಗ ಉತ್ತುಂಗದಲ್ಲಿದ್ದು, ಈ ಚಿತ್ರಗಳು ಅನನ್ಯ ಕ್ಷಣಗಳ ದಾಖಲೆಗಳಾಗುತ್ತವೆ.

Couples Pre wedding photo-shoot trending in Mysuru

ಹೊಸ ಟ್ರೆಂಡ್
ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಸಾಮಾನ್ಯವಾಗಿದ್ದು, ತಿಂಗಳಲ್ಲಿ 10ರಿಂದ 15 ಆರ್ಡರ್‌ ಇರುತ್ತವೆ. ಒಂದು ಆರ್ಡರ್ ಗೆ ಸಾಮಾನ್ಯವಾಗಿ 15 - 20 ಸಾವಿರ ಹಣವನ್ನು ಪಡೆದುಕೊಳ್ಳುತ್ತೇವೆ ಎಂದು ನಗರದ ಫೋಟೋಗ್ರಾಫರ್ ಶರಣ್ ತಿಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+