ಮೈಸೂರಿನಲ್ಲಿ ಗ್ರಾಪಂ ಅಧ್ಯಕ್ಷೆ ಮೇಲೆ ಅತ್ಯಾಚಾರಕ್ಕೆ ಯತ್ನ

ಮೈಸೂರು, ಜುಲೈ.27: ಗ್ರಾಮ ಪಂಚಾಯತ್ ಅಧ್ಯಕ್ಷೆಯ ಮೇಲೆಯೇ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಈ ಸಂಬಂಧ ಗ್ರಾಪಂ ಅಧ್ಯಕ್ಷೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ಕಂಪ್ಯೂಟರ್ ಆಪರೇಟರ್ ತಲೆತಪ್ಪಿಸಿಕೊಂಡಿದ್ದಾನೆ. "ಶೌಚಾಲಯ ನಿರ್ಮಾಣ ಯೋಜನೆಯ ಬಿಲ್ ಗೆ ಹೆಬ್ಬೆಟ್ಟು' ಗುರುತು ಪಡೆಯಬೇಕೆಂಬ ನೆಪ ಮಾಡಿಕೊಂಡು ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಬುಧವಾರ ಬೆಳಗ್ಗೆ ಅಧ್ಯಕ್ಷೆಯ ಮನೆಗೆ ಬಂದಿದ್ದ.

ಆಗ ನನ್ನ ಪತಿ ಮನೆಯಲ್ಲಿರಲಿಲ್ಲ. ಒಬ್ಬಳೇ ಇರುವುದನ್ನು ತಿಳಿದ ಆತ ಅತ್ಯಾಚಾರಕ್ಕೆ ಯತ್ನಿಸಿದ. ನನಗೆ ಆತನ ತಾಯಿಯಷ್ಟೇ ವಯಸ್ಸಾಗಿದೆ. ಹಾಗಿದ್ದರೂ ನನ್ನನ್ನು ತಬ್ಬಿ ಬಲಾತ್ಕಾರಕ್ಕೆ ಯತ್ನಿಸಿದ. ನನ್ನ ಕಿರುಚಾಟ ಕೇಳಿ ನೆರೆಹೊರೆಯವರು ಬಂದು ನನ್ನನ್ನು ರಕ್ಷಿಸಿದರು" ಎಂದು ಅಧ್ಯಕ್ಷೆ ದೂರಿನಲ್ಲಿ ವಿವರಿಸಿದ್ದಾರೆ.

Computer Operator has attempted to rape a Grama Panchayat President

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪಿಎಸ್ಐ ಪುನೀತ್, ಆರೋಪಿ ಕಂಪ್ಯೂಟರ್ ಆಪರೇಟರ್ ಬಂಧನಕ್ಕಾಗಿ ಶೋಧ ಆರಂಭಿಸಿದ್ದಾರೆ. ಆದರೆ, ಆರೋಪಿ ಪ್ರಭಾವಿಗಳ ಆಶ್ರಯ ಪಡೆಯಲು ಯತ್ನಿಸುತ್ತಿದ್ದಾನೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅಧ್ಯಕ್ಷೆ ಆಸಕ್ತಿ ತೋರುತ್ತಿಲ್ಲ ಎಂದು ಸಿಟ್ಟಾಗಿರುವ ಸದಸ್ಯರು ಅಧ್ಯಕ್ಷೆಯ ವಿರುದ್ಧ ತಿರುಗಿಬಿದ್ದಿದ್ದಾರೆ.

ಅಧ್ಯಕ್ಷೆ ವಿರುದ್ಧ ಅವಿಶ್ವಾಸ: ಅಧ್ಯಕ್ಷೆ ಗ್ರಾಮ ಪಂಚಾಯಿತಿ ಹತ್ತಿರ ತಲೆಹಾಕದೇ ತಿಂಗಳುಗಳೇ ಕಳೆದಿವೆ. ಅವರ ಈ ಬೇಜವಾಬ್ದಾರಿ ನಡವಳಿಕೆಯಿಂದ ಅಸಮಾಧಾನಗೊಂಡಿರುವ ಪಂಚಾಯಿತಿಯ 20 ಸದಸ್ಯರಲ್ಲಿ 16 ಜನರು ಅವಿಶ್ವಾಸ ಮಂಡನೆಗೆ ನಿರ್ಧರಿಸಿದ್ದಾರೆ.

ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡಿಸುವ ಪ್ರಸ್ತಾವನೆಗೆ 16 ಸದಸ್ಯರು ಸಹಿ ಹಾಕಿದ್ದು, ತುರ್ತು ಸಭೆ ಕರೆಯುವಂತೆ ಉಪ ವಿಭಾಗಾಧಿಕಾರಿಗೆ ಈ ಮೊದಲೇ ಮನವಿ ಮಾಡಿದ್ದಾರೆ. ಉಪ ವಿಭಾಗಾಧಿಕಾರಿಗಳ ಆದೇಶ ನಿರೀಕ್ಷಿಸುತ್ತಿರುವಾಗಲೇ ಶುಕ್ರವಾರ ಗ್ರಾಪಂ ಅಧ್ಯಕ್ಷರ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಉಪಾಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+