ಮೈಸೂರು ಯುವ ದಸರಾದಲ್ಲಿ ಕೋಕ್ ಸ್ಟುಡಿಯೋ ಮಾಡಿತು ಮೋಡಿ

ಮೈಸೂರು, ಸೆಪ್ಟೆಂಬರ್ 25 : ನಿನ್ನೆ ಮಹಾರಾಜ ಮೈದಾನದ ಯುವ ದಸರಾ ವೇದಿಕೆ ರಂಗುರಂಗಿನಿಂದ ಕಳೆಗಟ್ಟಿತ್ತು. 2ನೇ ಬಾರಿ ದಸರಾ ಮಹೋತ್ಸವದ ಯುವ ಸಂಭ್ರಮಕ್ಕೆ ಆಗಮಿಸಿರುವ ಎಂಟಿವಿ ಸಂಸ್ಥೆಯ ಕೋಕ್ ಸ್ಟುಡಿಯೋ ತಂಡ ಸಂಗೀತ ರಸಿಕರಿಗೆ ಮನರಂಜನೆ ನೀಡಿತು.

ವೈಭವದ ದಸರಾ ವಿಶೇಷ ಪುಟ

ಕೋಕ್ ಸ್ಟುಡಿಯೋದ ಅಸ್ಸಾಂ ಗಾಯಕ ಪಪೋನ್ 'ದಿಲ್ ಸೆ ದಿಲ್ ಗಬರಾಗಯಾ ಹೇ...' ಹಾಡಿನ ಮೂಲಕ ಸಂಗೀತ ಪಯಣ ಆರಂಭಿಸಿದರು. ನಂತರ ಕನ್ನಡದಲ್ಲಿ ನಮಸ್ಕಾರ ಮೈಸೂರು... ನೀವು ಹೇಗಿದ್ದೀರಾ...' ಎಂದು ಕೇಳಿ, ಸಂಗೀತದಿಂದಾಗಿ ತಮಗೆ ಅನೇಕ ಭಾಷೆ ಕಲಿಯುವ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡರು. ಯುವ ಮನಸ್ಸುಗಳು, ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಭಾನುವಾರ ಯುವ ದಸರಾದಲ್ಲಿ ಮೂರನೇ ದಿನ ಕೋಕ್ ಸ್ಟುಡಿಯೋದವರು ನೀಡಿದ ಸಂಗೀತ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು.

Cock studio attracts youths in Mysuru Yuva Dasara

ಪ್ಯಾಪೋಸ್ ಅವರನ್ನು ಸಂತಸ ಪಡಿಸಿದ ಪ್ರೇಕ್ಷಕರು:
ಪ್ಯಾಪೋಸ್ ಹಾಡೊಂದನ್ನು ಹಾಡುತ್ತಾ ಪ್ಯಾಪೋಸ್ ಪ್ರೇಕ್ಷರೆ ದಯವಿಟ್ಟು ತಮ್ಮ ಮೊಬೈಲ್ ಗಳಲ್ಲಿ ಲೈಟ್ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರೇಕ್ಷಕರು ತಮ್ಮ ಮೊಬೈಲ್ ಗಳಲ್ಲಿ ಲೈಟ್ ಗಳನ್ನು ಆನ್ ಮಾಡಿ ಪ್ಯಾಪೋಸ್ ಅವರನ್ನು ಸಂತಸ ಪಡಿಸಿದರು. ಇದರಿಂದ ಐದು ನಿಮಿಗಳ ಕಾಲ ಮೈದಾನದಲ್ಲಿ ಬೆಳಕಿನ ಚಿತ್ತಾರ ಮೂಡಿ ಬಂತು.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

Cock studio attracts youths in Mysuru Yuva Dasara

ಮುರಿದು ಬಿತ್ತು ಶಾಮಿಯಾನ

ಯುವ ದಸರಾ ಆರಂಭವಾಗಿ ಎರಡು ದಿನ ಕಳೆದರೂ ಯುವಜನತೆಯನ್ನು ಆಕರ್ಷಿಸುವಲ್ಲಿ ಯುವ ದಸರಾ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಯುವ ದಸರಾದಲ್ಲಿ ವೇದಿಕೆಯ ಎಡಭಾಗದಲ್ಲಿ ವೀಕ್ಷಕರು ಕುಳಿತುಕೊಳ್ಳುವಲ್ಲಿ ಅಳವಡಿಸಲಾದ ಶಾಮಿಯಾನ ಭಾನುವಾರ ಸಂಜೆ ಸುರಿದ ಮಳೆಗೆ ಕಳಚಿ ಬಿದ್ದಿದೆ.

Cock studio attracts youths in Mysuru Yuva Dasara

ಮೈಸೂರು ಮಹಾರಾಜ ಮೈದಾನದಲ್ಲಿ ಯುವ ದಸರಾಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಮೊದಲ ದಿನದಿಂದಲೇ ಖಾಲಿ ಖುರ್ಚಿಗಳು ಕಣ್ಣಿಗೆ ಗೋಚರಿಸುತ್ತಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+