'ನನಗೆ ಮರಾಠಿ ಬರೋಲ್ಲ ಕ್ಷಮಿಸಿ' ಎಂದ ಸಿಎಂ ಕನ್ನಡಿಗರ ಕ್ಷಮೆ ಕೇಳಲಿ: ಸಿಂಹ

ಮೈಸೂರು, ಏಪ್ರಿಲ್ 29: ಬೆಳಗಾವಿಯಲ್ಲಿ ನನಗೆ ಮರಾಠಿ ಬರೋಲ್ಲ. ಕ್ಷಮಿಸಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯ ಈ ಕೂಡಲೆ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತನಾಡಿದ ಸಿಂಹ, "ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡದ ಅರಿವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಪ್ರಣಾಳಿಕೆ, ಪ್ರನಾಳಿಕೆ ಈ ಪದಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ. ಇನ್ನೊಂದೆಡೆ ಬೆಳಗಾವಿಯಲ್ಲಿ ನಿಂತು ಮರಾಠಿ ಪ್ರೇಮ ಮೆರೆಯುತ್ತಾರೆ. ಇಲ್ಲಿ ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ. ಇವರದ್ದು ಕೇವಲ ರಾಜಕೀಯಕ್ಕಾಗಿ ಕನ್ನಡ ಪ್ರೇಮ," ಎಂದು ಅವರು ಕಿಡಿಕಾರಿದರು.

CM Siddaramaiah must apologize to the Kannadigas: Pratap Simha

ಮೈಸೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, "ನಿಜವಾದ ಕನ್ನಡ ಪ್ರೇಮ ಇದ್ದಿದ್ದರೆ ಮುಖ್ಯಮಂತ್ರಿ ಬೆಳಗಾವಿಯಲ್ಲಿ ಮರಾಠಿಗರ ಕ್ಷಮೆ ಕೇಳುತ್ತಿರಲಿಲ್ಲ. ರಾಜ್ಯದ ಜನರಿಗೆ ಸಿದ್ದರಾಮಯ್ಯರ ಬೋಗಸ್ ಕನ್ನಡ ಪ್ರೇಮ ಅರ್ಥವಾಗಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಕನ್ನಡಿಗರೇ ಪಾಠ ಕಲಿಸುತ್ತಾರೆ," ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+