ಮೈಸೂರು: ಹಳೆಯ ಕಟ್ಟಡ ಮೇಲೇರಿ ಜಂಬೂ ಸವಾರಿ ವೀಕ್ಷಣೆಗೆ ನಿಷೇಧ
ಮೈಸೂರು ಜಂಬೂ ಸವಾರಿ ವೇಳೆ ಹಳೆಯ, ಪಾರಂಪರಿಕ ಕಟ್ಟಡ ಹತ್ತದಂತೆ ಆದೇಶ. ತೀವ್ರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ.
ಬೆಂಗಳೂರು, ಸೆಪ್ಟೆಂಬರ್ 27: ಇದೇ ತಿಂಗಳ 30ರಂದು ಮೈಸೂರಿನಲ್ಲಿ ನಡೆಯಲಿರುವ ಜಂಬೂ ಸವಾರಿಯನ್ನು ಯಾರೂ ಪಾರಂಪರಿಕ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಬಾರದೆಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಆದೇಶಿಸಿದ್ದಾರೆ.
ಮೈಸೂರಿನಲ್ಲಿ ಅತಿಯಾಗಿ ಮಳೆ ಬೀಳುತ್ತಿದ್ದು, ಹಳೆಯ ಕಟ್ಟಡಗಳು ದುರ್ಬಲವಾಗಿರುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶ ನೀಡಲಾಗಿದೆ.

ಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆಯಲ್ಲಿ ಈ ಸವಾರಿ ಸಾಗಲಿದ್ದು, ಇದನ್ನು ನೋಡಲು ಲಕ್ಷಾಂತರ ಮಂದಿ ಸೇರಲಿದ್ದಾರೆ. ಈ ರಸ್ತೆಯ ಎರಡೂ ಬದಿಯಲ್ಲಿ ಹಲವಾರು ಪಾರಂಪರಿಕ ಹಾಗೂ ಹಳೆಯ ಕಟ್ಟಡಗಳು ಇರುವುದರಿಂದ ಸವಾರಿ ನೋಡಲು ಅನೇಕರು ಕಟ್ಟಡಗಳನ್ನು ಹತ್ತಿ ನೋಡುವುದು ವಾಡಿಕೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ, ಕಟ್ಟಡ ಹತ್ತುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.












Click it and Unblock the Notifications