ಮೈಸೂರು ಅರಮನೆ ಕಣ್ತುಂಬಿಕೊಂಡ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮಗಳು

ಮೈಸೂರು, ಜೂನ್ 4 : ಮೈಸೂರು ನಗರದ ಅಂದಕ್ಕೆ ಮನಸೋಲದವರು ಉಂಟೇ?! ಇನ್ನು ಅರಮನೆಯಂತೂ ಸಾಂಸ್ಕೃತಿಕ ಮಕುಟ ಮಣಿಯಂದೇ ಹೆಸರಾಗಿದೆ. ಇಲ್ಲಿನ ಅರಮನೆಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಗಳು ಬನ್ಸೂರಿ ಸ್ವರಾಜ್ ತಮ್ಮ ಸ್ನೇಹಿತೆಯೊಂದಿಗೆ ಭೇಟಿ ನೀಡಿ, ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಜತೆಗಿದ್ದು, ಬನ್ಸೂರಿ ಅವರಿಗೆ ಮೈಸೂರು ದರ್ಶನ ಮಾಡಿಸುವ ಜೊತೆಗೆ ಒಡೆಯರ್ ಮನೆತನದ ಇತಿಹಾಸವನ್ನು ಕೂಡ ಪರಿಚಯಿಸಿದ್ದಾರೆ. ಅರಮನೆ, ಮೃಗಾಲಯ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳಿಗೆ ಬನ್ಸೂರಿ ಸ್ವರಾಜ್ ಭೇಟಿ ನೀಡಿ, ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಅರಮನೆಯು ವಿದ್ಯುದ್ದೀಪದಿಂದ ಅಲಂಕಾರ ಆಗುತ್ತಿದ್ದಂತೆ ಸಂತಸಗೊಂಡ ಕ್ಷಣವನ್ನು ಸಂಸದ ಪ್ರತಾಪ್ ಸಿಂಹ ಕೆಲ ನಿಮಿಷ ಫೇಸ್ ಬುಕ್ ಲೈವ್ ಬಂದು, ಬನ್ಸೂರಿ ಸ್ವರಾಜ್ ಮತ್ತು ತಮ್ಮ ಮಗಳೊಂದಿಗೆ ಅರಮನೆಯ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಮಾಡುತ್ತಿರುವುದಾಗಿ ತಿಳಿಸಿದರು.

Central minister Sushma Swarajs daughter visited Mysuru palace

ಒಟ್ಟಾರೆ ಮೈಸೂರು ನಗರವು ತನ್ನ ಸೊಬಗಿನಿಂದ ನಮ್ಮ ರಾಜ್ಯದವರನ್ನಷ್ಟೇ ಅಲ್ಲ, ಇತರ ರಾಜ್ಯ-ದೇಶದವರ ಮೆಚ್ಚುಗೆ ಪಡೆದಿರುವುದು ಹೆಮ್ಮೆಯ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+