ಮೈಸೂರಿನಲ್ಲಿ ವೋಟ್ ಹಾಕಿದ್ರೆ ಊಟ, ತಿಂಡಿ, ಸಿನಿಮಾಗೆ ಶೇ.50 ರಷ್ಟು ರಿಯಾಯಿತಿ!
ಮೈಸೂರು, ಏಪ್ರಿಲ್ 16:ಲೋಕಸಭಾ ಚುನಾವಣೆಯ ಮತದಾನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಮೈಸೂರು ಹೋಟೆಲ್ ಮಾಲೀಕರ ಸಂಘವು ಪ್ರಥಮ ಬಾರಿಗೆ ತಿಂಡಿ ಹಾಗೂ ಊಟೋಪಚಾರದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ ಖಡ್ಡಾಯ ಮತದಾನಕ್ಕೆ ಯುವಕ-ಯುವತಿಯರು ಹಾಗೂ ಸಾರ್ವಜನಿಕರನ್ನು ಪ್ರೇರೇಪಿಸಲು ಆ ಒಂದು ದಿನ ಖಡ್ಡಾಯವಾಗಿ ಮತದಾನ ಮಾಡಿ ಬಂದ ಯುವಕ ಯುವತಿಯರು ಹಾಗೂ ಸಾರ್ವಜನಿಕರಿಗೆ ಹೋಟೆಲ್ ತಿಂಡಿ ಹಾಗೂ ಊಟೋಪಚಾರದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಮತ ಚಲಾಯಿಸಿ ಬಂದ 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ದಂಪತಿಗಳಿಗೆ ಕೆಲ ವಸತಿಗೃಹಗಳಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಇದರೊಂದಿಗೆ ನೌಕರರಿಗೆ ಅತಿ ಹೆಚ್ಚು ಮತದಾನ ಮಾಡಿಸಿದ ಮೂರು ಹೋಟೆಲ್ ಮಾಲೀಕರಿಗೆ ಏಪ್ರಿಲ್ 30ರಂದು ಸಂಘದ ಸಭೆಯಲ್ಲಿ ಸನ್ಮಾನಿಸಲಾಗುವುದು.

ನೃತ್ಯಂ ಚಿತ್ರಕ್ಕೂ ಸಿಗಲಿದೆ ರಿಯಾಯಿತಿ
ಮತದಾನ ಮಾಡಿದವರು ಶಾಹಿ ಗುರುತಿರುವ ಬೆರಳು ತೋರಿಸಿದರೆ ವಿಶೇಷ ರಿಯಾಯಿತಿಯಲ್ಲಿ 'ನೃತ್ಯಂ' ಮಕ್ಕಳ ಚಲನಚಿತ್ರದ ಟಿಕೆಟ್ ನೀಡಲು ವ್ಯವಸ್ಥೆ ಮಾಡಲಾಗಿದೆ. ನಗರದ 650 ನಂದಿನಿ ಹಾಲಿನ ಕೇಂದ್ರಗಳಲ್ಲಿಯೂ ರಿಯಾಯಿತಿ ಟಿಕೆಟ್ ನೀಡಲಾಗುವುದು ಎಂದು ಚಿತ್ರದ ನಿರ್ಮಾಪಕ ಪ್ರವೀಣ್ ಲಾಡ್ ಅವರು ತಿಳಿಸಿದ್ದಾರೆ.












Click it and Unblock the Notifications