ಜೆಡಿಎಸ್ ಜೊತೆ ಮೈತ್ರಿ ಇಲ್ಲ, ಉ.ಪ್ರದೇಶ ರೀತಿ ಬಿಜೆಪಿಗೆ ಅಧಿಕಾರ: ಬಿಎಸ್‌ವೈ
Recommended Video

ಮೈಸೂರು, ಮೇ 01: ಬಿಜೆಪಿ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ 60-50 ಸೀಟುಗಳನ್ನು ಗೆದ್ದರೆ, ಜೆಡಿಎಸ್ ಗೆದ್ದರೆ 20-30 ಸೀಟುಗೆಲ್ಲಲಿದೆ ಅಷ್ಟೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಮೈಸೂರಿನ ಸಮೀಪ ಸಂತೇರಮರನಹಳ್ಳಿಯಲ್ಲಿ ಆಯೋಜಿತವಾಗಿರುವ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಯಡಿಯೂರಪ್ಪ ಮಾತನಾಡಿದರು.
ಸಿದ್ದರಾಮಯ್ಯ ಅವರ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಖಜಾನೆಯನ್ನು ಲೂಟಿ ಮಾಡಿದ್ದಾನೆ, ಅಭಿವೃದ್ಧಿಗಾಗಿ ಖರ್ಚು ಮಾಡಬೇಕಿದ್ದ 50000 ಕೋಟಿಯಲ್ಲಿ ಕೇವಲ 6-7 ಸಾವಿರ ಕೋಟಿಯನ್ನಷ್ಟೆ ಖರ್ಚು ಮಾಡಿದ್ದಾನೆ ಎಂದು ಆರೋಪ ಮಾಡಿದರು.

'ಸಿದ್ದರಾಮಯ್ಯನ ಸಮಯ ಮುಗಿದಿದೆ ಎಂದ ಯಡಿಯೂರಪ್ಪ, ಇನ್ನು 12 ದಿನಗಳ ನಂತರ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ, ಅದರ ಬದಲು ಈಗಲೇ ಗೌರವಯುತವಾಗಿ ಮನೆಗೆ ಹೊದರೆ ಒಳ್ಳೆಯದು' ಎಂದರು.
'ನನ್ನನ್ನು ಮುಖ್ಯಮಂತ್ರಿ ಆಗದಂತೆ ತಡೆಯಲು ಲಿಂಗಾಯತ-ವೀರಶೈವ ಸಮುದಾಯವನ್ನು ಸಿದ್ದರಾಮಯ್ಯ ಬೇರೆ-ಬೇರೆ ಮಾಡಿದರು ಆದರೆ ವೀರಶೈವ ಹಾಗೂ ಲಿಂಗಾಯತರು ಇಬ್ಬರೂ ಬಿಜೆಪಿ ಪರ ಇರುವುದನ್ನು ಮನಗಂಡು ಆ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ' ಎಂದರು.
ಅಧಿಕಾರಿದ ಬಲ, ಹಣದ ಬಲ, ಹೆಂಡದ ಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊರಟಿದೆ, ಆದರೆ ಜನ ಅವರನ್ನು ಸೋಲಿಸಲಿದ್ದಾರೆ ಎಂದ ಅವರು, ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಆದ ಮೇಲೆ ಶೇ 4-5 ಪ್ರತಿಶತ ವೋಟು ಹೆಚ್ಚಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಯಡಿಯೂರಪ್ಪ, 'ನಮ್ಮ ಕಾರ್ಯಕರ್ತರಿಗೆ ಅಡ್ಡಿ ಪಡಿಸಿದರೆ ಚೆನ್ನಾಗಿರೊಲ್ಲ' ಎಂದು ಪೊಲೀಸರಿಗೆ ಬಹಿರಂಗವಾಗಿ ಆವಾಜ್ ಹಾಕಿದರು.












Click it and Unblock the Notifications