"ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತ ಸಿದ್ದರಾಮಯ್ಯ''

ಮೈಸೂರು, ಡಿಸೆಂಬರ್ 16: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮಗೆ ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತು ಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಮೈಸೂರಿನ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್, ಅಹಿಂದ ಚಳುವಳಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು, ಎಲ್ಲ ವರ್ಗದವರು ಅವರನ್ನು ಬೆಂಬಲಿಸಿದರು. ಸಿಎಂ ಆದ ನಂತರ ಸಿದ್ದರಾಮಯ್ಯ ಅಹಿಂದ ವರ್ಗವನ್ನೇ ಮರೆತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರದಲ್ಲಿರುವಾಗ ನಮ್ಮ ಪರ ನಿಂತ ಸಮುದಾಯಗಳ ಪರ ಕೆಲಸ ಮಾಡಬೇಕು. ಪ್ರತಿ ವರ್ಗಗಳಿಗೂ ಮೋರ್ಚಾಗಳನ್ನು ನೇಮಕಗೊಳಿಸಿ ತಳಮಟ್ಟದ ಕಾರ್ಯಕರ್ತರ ಮೂಲಕ ಬಿಜೆಪಿ ಆಯಾ ಸಮುದಾಯಗಳ ಸಮಸ್ಯೆ ಪರಿಹರಿಸಬೇಕು ಎಂದರು.

Mysuru: BJP State President Nalin Kumar Kateel Outrage Against Former CM Siddaramaiah

ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಕೇವಲ ಮೇಲ್ವರ್ಗದ ಪಕ್ಷ ಎಂಬಂತೆ ಇತ್ತು. ಆದರೆ ಇವತ್ತು ಎಲ್ಲ ವರ್ಗದವರು ಪಕ್ಷದ ಮುಂಚೂಣಿಯ ಕುರ್ಚಿಯಲ್ಲಿದ್ದಾರೆ. ಬಿಜೆಪಿ ಎಲ್ಲ ವರ್ಗದ ಸ್ಪರ್ಶ ಪಡೆದಿದೆ. ಇವತ್ತು ದೇಶದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರು ಬಿಜೆಪಿ ಪಕ್ಷದಲ್ಲಿದ್ದಾರೆ, ಇದು ಬಿಜೆಪಿಯ ಶಕ್ತಿ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸಮುದಾಯ, ಸಮಾಜವನ್ನು ಕಡೆಗಣಿಸಿ ಕಾಂಗ್ರೆಸ್ ಇಂದು ಅವನತಿ ಕಾಣುತ್ತಿದೆ. ಈ ಹಿನ್ನೆಲೆ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರದ್ದು ಗಲಭೆ ಸೃಷ್ಠಿಮಾಡುವ ರಾಜಕಾರಣ. ಕಾಂಗ್ರೆಸ್ ನವರಿಗೆ ಸ್ವಾತಂತ್ರ್ಯದ ನಂತರ ಅಧಿಕಾರ ದಾಹ ಹೆಚ್ಚಾಗಿದೆ. ಅಧಿಕಾರ ಕಳೆದುಕೊಂಡಾಗ ಗಲಭೆಗಳನ್ನು ಸೃಷ್ಠಿ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಬೆಂಕಿ ಹಾಕಿರುವ ಘಟನೆಗಳು ಇವೆ ಎಂದು ಹರಿಹಾಯ್ದರು.

ಅಧಿಕ್ಕಾರಕ್ಕಾಗಿ ಕಾಂಗ್ರೆಸ್ ಗೂಂಡಾಗಿರಿ ಮಾಡಿರುವ ನಿದರ್ಶನಗಳೂ ಕಣ್ಮುಂದೆ ಇವೆ. ಇವರ ವರ್ತನೆಗೆ ಬೇಸತ್ತು ಪಕ್ಷದಿಂದ ಹೊರ ಬಂದ ಶಾಸಕರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದರು. ವಿಧಾನ ಸೌಧದಲ್ಲಿ ಒಬ್ಬ ಶಾಸಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು ಎಂದು ಹಿಂದಿನ ಘಟನೆ ನೆನಪಿಸಿದರು.

ಈಗ ವಿಧಾನ ಪರಿಷತ್ ನಲ್ಲೂ ದಾಂಧಲೆ ಮಾಡಿದ್ದಾರೆ, ಗೂಂಡಾಗಿರಿ ಮಾಡಿ ಪರಿಷತ್ತಿನ ಮಾನ ಹರಾಜು ಹಾಕಿದ್ದಾರೆ. ಅತ್ಯಂತ ಹಿರಿಯ ಹಾಗೂ ಗೌರವಯುತ ವ್ಯಕ್ತಿಗಳಿರುವ ಜಾಗದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ದಿವಾಳಿತನಕ್ಕೆ ಈ ರೀತಿಯ ಗೂಂಡಾ ರಾಜಕಾರಣವೇ ಕಾರಣ ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

ಅಮೆರಿಕನ್ ಜಾಕ್‌ಪಾಟ್‌ನಲ್ಲಿ 520 ಮಿಲಿಯನ್ ಡಾಲರ್ ಗೆಲ್ಲಲು ಅವಕಾಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+