ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯ ಸಂಕೇಶ್ವರ್ ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 29; ಮೂಗಿಗೆ ಎರಡು ಹನಿ ಲಿಂಬೆ ರಸ ಹಾಕಿದರೆ ದೇಹದಲ್ಲಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹಲವಾರು ಜನರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಗುರುವಾರ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಕೊರೊನಾ ಚಿಕಿತ್ಸೆಗೆ ಮೂಗಿಗೆ ನಿಂಬೆಹಣ್ಣಿನ ರಸ ಹಾಕಿ ಎಂಬ ಉದ್ಯಮಿ ಡಾ. ವಿಜಯ ಸಂಕೇಶ್ವರ್ ಹೇಳಿರುವುದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.

ವಿಜಯ ಸಂಕೇಶ್ವರ್ ಹೇಳಿಕೆ ಬರೀ ಬೊಗಳೆ; ನರೇಂದ್ರ ನಾಯಕ್ವಿಜಯ ಸಂಕೇಶ್ವರ್ ಹೇಳಿಕೆ ಬರೀ ಬೊಗಳೆ; ನರೇಂದ್ರ ನಾಯಕ್

"ಸಂಕೇಶ್ವರ್ ಅವರೇನೂ ನಿಂಬೆಹಣ್ಣಿನ ರಸ ಕೊರೊನಾಗೆ ಮೆಡಿಸನ್ ಎಂದು ಹೇಳಿದ್ದಾರಾ?. ದೇಹದ ಕಫಾ ತೆಗೆಯಲು ನಿಂಬೆಹಣ್ಣಿನ ರಸ ಸಹಕಾರಿ ಎಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ?. ಇದನ್ನೇಕೆ ಕೆಲವರು ವಿವಾದ ಮಾಡುತ್ತಿದ್ದಾರೆ?" ಎಂದು ಕೇಳಿದರು.

ಮೂರು ಸಾವಿರ ಮಠದ ಸ್ವಾಮೀಜಿ ವಿರುದ್ಧ ಗುಡುಗಿದ ವಿಜಯ ಸಂಕೇಶ್ವರಮೂರು ಸಾವಿರ ಮಠದ ಸ್ವಾಮೀಜಿ ವಿರುದ್ಧ ಗುಡುಗಿದ ವಿಜಯ ಸಂಕೇಶ್ವರ

 BJP MP Pratap Simha Comment On Vijay Sankeshwar Statement

"ವಿಜಯ ಸಂಕೇಶ್ವರ್ ಅವರ ಬಗ್ಗೆ ಮಾತಾಡುವ ಮುನ್ನಾ ಮಾತಾಡುವವರು ತಮ್ಮ ಯೋಗ್ಯತೆ ಏನೆಂದು ನೋಡಿಕೊಳ್ಳಲಿ" ಎಂದು ಸಂಸದ ಪ್ರತಾಪ್ ಸಿಂಹ ಟೀಕೆಗಳನ್ನು ಮಾಡುವವರಿಗೆ ತಿರುಗೇಟು ನೀಡಿದರು.

ಕೋವಿಡ್ ಸಾವು; ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ ಕೋವಿಡ್ ಸಾವು; ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ

ಪ್ರಧಾನಿ ಮೋದಿಯನ್ನು ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಟೀಕಿಸುವವರಿಗೂ ತಿರುಗೇಟು ನೀಡಿದ ಪ್ರತಾಪ್ ಸಿಂಹ, "ಮೋದಿ ಉಜ್ವಲವಾಗಿ ಬೆಳುಗುತ್ತಿರುವ ಸೂರ್ಯ. ಸೂರ್ಯನೆಡೆಗೆ ನಿಂತು ಉಗುಳಿದರೆ ಉಗುಳು ಯಾರಿಗೆ ತಗುಲುತ್ತದೆ ಗೊತ್ತಾ? ಮೋದಿ ಟೀಕಿಸುವವರ ಕಥೆಯೂ ಅಷ್ಟೆ" ಎಂದರು.

English summary
Mysuru and Kodagu BJP MP Pratap Simha support the VRL group chairman Vijay Sankeshwar statement of 2 drops of lemon in nose can prevent Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X