ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಬಹುನಿರೀಕ್ಷಿತ ಶ್ರೀನಿವಾಸ್ ಪ್ರಸಾದ್ ವಿರಚಿತ ಪುಸ್ತಕ ಬಿಡುಗಡೆ

By Yashaswini
|
Google Oneindia Kannada News

ಮೈಸೂರು, ಮಾರ್ಚ್ 21: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಅವರ ರಚಿಸಿರುವ ಕೃತಿ ಇಂದು ಬಿಡುಗಡೆಯಾಗಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಿ. ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ವಿ. ಶ್ರೀನಿವಾಸ್ ಪ್ರಸಾದ್ ಅವರು ಬರೆದಿರುವ ಸ್ವಾಭಿಮಾನ ರಾಜಕಾರಣದ ಹಿನ್ನೆಲೆ ನಂಜನಗೂಡು ವಿಧಾನಸಭಾ ಉಪ ಚುನಾವಣೆ- ವಿಶ್ಲೇಷಣೆ' ಕೃತಿ ಬಿಡುಗಡೆ ಸಮಾರಂಭವನ್ನು ಬುಧವಾರ ಸಂಜೆ 5 ಗಂಟೆಗೆ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಉಪಚುನಾವಣೆ ಕಹಿ ಅನುಭವ ಬರೆಯುತ್ತಿದ್ದಾರೆ ಶ್ರೀನಿವಾಸ ಪ್ರಸಾದ್!ಉಪಚುನಾವಣೆ ಕಹಿ ಅನುಭವ ಬರೆಯುತ್ತಿದ್ದಾರೆ ಶ್ರೀನಿವಾಸ ಪ್ರಸಾದ್!

ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಸಿ. ಪಿ. ಕೃಷ್ಣಕುಮಾರ್ (ಸಿಪಿಕೆ) ಅಧ್ಯಕ್ಷತೆ ವಹಿಸಲಿದ್ದಾರೆ. ಕೃತಿಯ ಕರ್ತೃ ವಿ. ಶ್ರೀನಿವಾಸ್ ಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

BJP leader V. Shrinivasa Prasads Book will release on today

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ್ತು ಅದಕ್ಕೂ ಹಿಂದಿನ ರಾಜಕೀಯ ರಂಗದಲ್ಲಿ ತಾವು ಅನುಭವಿಸಿದ ನೋವು, ಸ್ವಾಭಿಮಾನದಿಂದ ನಡೆಸಿದ ಹೋರಾಟ, ರಾಜಕೀಯ ವೈರಿಗಳ ಕುಟಿಲತೆ, ವಂಚನೆ, ವಿಶ್ವಾಸ ದ್ರೋಹ ಇತ್ಯಾದಿ ಸಂಗತಿಗಳನ್ನು ಪ್ರಸಾದ್ ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ.

ವಿ. ಶ್ರೀನಿವಾಸ ಪ್ರಸಾದ್‌ ಅವರು ಲೋಕಸಭೆ ಮತ್ತು ವಿಧಾನಸಭೆ ಸೇರಿ 12 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಕ್ಷೇತ್ರದ ಹಿರಿಯ ರಾಜಕಾರಣಿಯಾಗಿದ್ದಾರೆ. ಅವರು ತಮ್ಮ ಪುಸ್ತಕದ ಆರಂಭದಲ್ಲಿ ಅಂತರಾಳದ ಮಾತು ಎಂಬ ಶೀರ್ಷಿಕೆಯಡಿ ಅವರ ರಾಜಕೀಯ ಪ್ರವೇಶ, ಸಿದ್ದರಾಮಯ್ಯ ಅವರ ರಾಜಕೀಯ ಪ್ರವೇಶ, ಅವರ ವರ್ತನೆ, ಇಬ್ಬರಲ್ಲಿ ಹಿರಿಯರು ಯಾರು? ನಂಜನಗೂಡು ಉಪ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಹಾಗೂ ಅದಕ್ಕೆ ಕಾರಣ ಸೇರಿದಂತೆ ಕಾಂಗ್ರೆಸ್‌ನಲ್ಲಿ ದಲಿತ ಪ್ರಭಾವಿ ರಾಜಕಾರಣಿಗಳನ್ನು ಹೇಗೆ ತುಳಿಯುವ ಕಾರ್ಯ ಮಾಡಲಾಗಿದೆ ಎಂಬುದರ ಕುರಿತು ಸುಮಾರು 100 ಪುಟಗಳಲ್ಲಿ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ.

English summary
A book of 'Swamibimanda Rajakaranada Hinnele Nanjanagudu Vidhanasabhe Chunavane – Vishleshane' written by BJP leader V Shrinivasa Prasad will be released today evening in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X