ಸಂದರ್ಶನ: ತಪ್ಪಾಯ್ತು ಕ್ಷಮಿಸಿ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಡಾಲ್ ನಿವೇದಿತಾ
ಮೈಸೂರು, ಆಗಸ್ಟ್ 2 : ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಮೊನ್ನೆ -ಮೊನ್ನೆ ಮಾಡಿದ ಕಿಕಿ ಡ್ಯಾನ್ಸ್ ವಿವಾದಕ್ಕೆ ಕಾರಣವಾಗಿದೆ. ಅದರ ಜೊತೆಗೆ ಅದು ಕಾನೂನು ಸಂಕಟವನ್ನು ಸಹ ತಂದೊಡ್ಡಿದೆ. ಅದನ್ನು ನಿವೇದಿತಾ ಹೇಗೆ ಫೇಸ್ ಮಾಡ್ತಾರೆ? ಏಕೆ ಈ ನೃತ್ಯ ಮಾಡಿದರು? ಎಂಬುದರ ಕುರಿತಾಗಿ ನಿವೇದಿತಾ ಅವರೇ ಉತ್ತರಿಸಿದ್ದಾರೆ ನೋಡಿ..
1. ಏನಿದು ಕಿಕಿ ?
ಕಿಕಿ ಎಂಬುದು ಗ್ಲೋಬಲ್ ಚಾಲೆಂಜ್. ನಾನು ಯುನಿಕ್ ಆಗಿದೆ ಎಂದು ಅದನ್ನು ಸ್ವೀಕರಿಸಿದೆ. ಕಿಕಿ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಮಾಡುವ ಮುಂಚೆ ನಡೆದ ಅಪಘಾತಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಅದರ ಬಗ್ಗೆ ಅರಿವಿದ್ದರೆ ನಾನು ಖಂಡಿತ ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ.
ನನಗೆ ನನ್ನ ಜೀವದ ಬೆಲೆ ಏನೆಂದು ಈಗ ಅರಿವಾಗಿದೆ. ನಾನು ವಿಡಿಯೋ ಮಾಡಬೇಕಾದರೂ ಸಹ ಮುಂಜಾಗೃತಾ ಕ್ರಮ ವಹಿಸಿದ್ದೆ. ಸ್ಲೋ ವೆಹಿಕಲ್ ಮೂವಿಂಗ್, ಜನನಿಬಿಡ ಪ್ರದೇಶದಲ್ಲಿ ಅದನ್ನು ಚಿತ್ರೀಕರಿಸಲಾಗಿತ್ತು.

ಹುಟ್ಟಿದಾಗಿನಿಂದಲೂ ಯಾರೂ ಸೆಲಿಬ್ರಿಟಿಗಳಲ್ಲ. ಮಾಮೂಲಿಯಾಗಿ ಮ್ಯೂಸಿಕಲ್, ಡಬ್ ಸ್ಮ್ಯಾಶ್ ವಿಡಿಯೋಗಳ ಹಾಗೆಯೇ ಇದನ್ನು ಮಾಡಿದ್ದು ಅಷ್ಟೇ. ನ್ಯೂಸ್ ಅಲ್ಲಿ ಬಂದ ಮೇಲೆಯೇ ನಾನೊಬ್ಬ ಸೆಲಿಬ್ರಿಟಿ ಎಂದು ನನಗನ್ನಿಸಿದ್ದು ಅದಾದ ಬಳಿಕ ಪೋಸ್ಟ್ ಡಿಲಿಟ್ ಮಾಡಿದ್ದೇ.
2. ನೀವು ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ಬಂದ ಕಮೆಂಟ್ ಗಳನ್ನು ಪರಿಶೀಲಿಸಿದ್ರಾ?
ನಾನೇನು ಗೊತ್ತಾಗಿ ಮಾಡಿಲ್ಲ. ಅದು ಅರಿವಿಲ್ಲದೇ ಆದ ಘಟನೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ.
3. ಕಿಕಿ ಡ್ಯಾನ್ಸ್ ವಿರುದ್ಧವಾಗಿ ದೂರು ದಾಖಲಾಗಿದೆ ಈ ಬಗ್ಗೆ ನಿಮ್ಮ ಅನಿಸಿಕೆ ಏನು ?
ನಾನು ವಿಡಿಯೋ ಅಪ್ಲೋಡ್ ಮಾಡಿದಾಗ ಯಾರಿಗೂ ಕೂಡ ನೀವು ಡ್ಯಾನ್ಸ್ ಮಾಡಿ ಎಂದು ಹೇಳಿಲ್ಲ. ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. ನಾನು ತಪ್ಪು ಮಾಡಿದರೆ ಖಂಡಿತ ಶಿಕ್ಷೆಗೆ ಸಿದ್ಧ. ನನಗೆ ಈ ಕೇಸ್ ಬಗ್ಗೆ ಏನು ಗೊತ್ತಿಲ್ಲ. ಕೇವಲ ಕ್ರೇಜ್ ಗಾಗಿ ಮಾಡಿದೆ ಅಷ್ಟೇ. ತಪ್ಪಿನ ಅರಿವಾಗಿದೆ ತಿದ್ದಿಕೊಳ್ಳುತ್ತೇನೆ.
4. ವಿಡಿಯೋ ಮಾಡುವುದಕ್ಕಿಂತ ಮುಂಚಿತವಾಗಿ ವಿಡಿಯೋ ನೋಡಿದ್ದು ಎಲ್ಲಿ ?
ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ನೋಡಿದ್ದೆ. ಆದರೆ ನಾನು ನೋಡಿದ್ದು ಸಾದಾ ಹಾಡು ನೃತ್ಯದ ವಿಡಿಯೋವಷ್ಟೇ. ಅಪಘಾತದ ವಿಡಿಯೋ ನೋಡಿದ್ದರೆ ಖಂಡಿತಾ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಬಿಗ್ ಬಾಸ್ ನಲ್ಲೇ ಹಲವು ಟಾಸ್ಕ್ ಮಾಡಲು ಹಿಂಜರಿಯುತ್ತಿದ್ದೆ. ಇಂತಹ ವಿಡಿಯೋ ರಿಸ್ಕ್ ಅಂತಹ ಗೊತ್ತಿದ್ರೆ ಮಾಡುತ್ತಿದ್ನಾ ಹೇಳಿ ?
5. ನಿಮಗೆ ಇದು ಬೇಕಿತ್ತು ಎಂದೆನಿಸುತ್ತದೆಯಾ ?
( ಅಳುತ್ತಾ ) ಹೌದು. ನಾನು ಸಣ್ಣವಳು. ನನಗೆ ಈ ಟಾರ್ಚರ್ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಿಂಸೆ ಎನಿಸುತ್ತಿದೆ. ಕೋರ್ಟ್, ಜೈಲು ಎಂಬ ಪದವನ್ನು ಉಚ್ಚರಿಸದವಳು ನಾನಲ್ಲ. ನಿಮ್ಮೆಲ್ಲಾ ಪ್ರಶ್ನೆಗಳಿಂದ ನಾನು ಮೆಂಟಲಿ ವೀಕ್ ಆಗುತ್ತಿದ್ದೇನೆ ಎಂದನಿಸುತ್ತಿದೆ. ಇವೆಲ್ಲಾ ನೋಡಿದರೆ ನಾನೇದರೂ ಮಾಡಿಕೊಂಡು ಬಿಡ್ಲಾ ಎಂದೆನಿಸುತ್ತಿದೆ. ನನಗೇನಾದ್ರೂ ಆದರೆ ಯಾರು ಹೊಣೆ ?
6. ನಿಮ್ಮಿಂದಾದ ಮಿಸ್ಟೇಕ್ ಗೆ ಏನು ಹೇಳಲು ಬಯಸುತ್ತೀರಾ ?
ಐ ಎಮ್ ಸಾರಿ. ನನ್ನಿಂದ ತಪ್ಪಾಗಿದೆ. ನನಗೆ ಫೋನ್ ಮಾಡಿ ಅಥವಾ ಭೇಟಿಯಾಗಿ ತಪ್ಪಾಗಿದೆ ನಿನ್ನಿಂದ ಎಂದು ಹೇಳಬಹುದಿತ್ತು. ಆದರೆ ಕೇಸ್ ಲಾಡ್ಜ್ ಮಾಡುವ ಅಗತ್ಯವಿರಲಿಲ್ಲ. ಆದರೂ ಪರವಾಗಿಲ್ಲ ಎದುರಿಸುತ್ತೇನೆ.












Click it and Unblock the Notifications