ಅಯೋಧ್ಯೆಗೆ ರಾಮನ ಮೂರ್ತಿ ಕೆತ್ತನೆ ಮಾಡಿದ ಮೈಸೂರಿನ ಶಿಲ್ಪಿಗೆ ಹೆಸರಾಂತ ಸ್ವೀಟ್ ಅಂಗಡಿಯಿಂದ ಸಿಕ್ತು ಭಾರೀ ಉಡುಗೊರೆ
ಮೈಸೂರು, ಜನವರಿ, 19: ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆ ಜನವರಿ 19ರಂದು ಆಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ಅಲ್ಲದೇ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇನ್ನು ಈ ಮಂದಿರಕ್ಕೆ ರಾಮನ ಮೂರ್ತಿ ಮಾಡಿಕೊಟ್ಟಿರುವುದು ಕರ್ನಾಟಕದ ಮೈಸೂರಿನ ಯೋಗರಾಜ್ ಆಗಿದ್ದು, ಇವರಿಗೆ ಇದೀಗ ಮೈಸೂರಿನ ಸ್ವೀಟ್ ಅಂಗಡಿಯೊಂದು ರಾಮ ಮಂದಿರದ ಪ್ರತಿಕೃತಿಯನ್ನು ವಿವಿಧ ಸಿಹಿತಿಂಡಿಗಳಿಂದ ತಯಾರಿಸಿ ಉಡುಗೊರೆಯಾಗಿ ನೀಡಿದೆ.
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲು ಆಯ್ಕೆ ಆಗಿದ್ದ ಅರುಣ್ ಯೋಗಿರಾಜ್ ಅವರಿಗೆ ಮೈಸೂರಿನ ಹೆಸರಾಂತ ಸ್ವೀಟ್ ಅಂಗಡಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಇನ್ನು ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರವನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡಲು ನಿರ್ಧರಿಸಿದ್ದಾರೆ.

ಇದೇ ವೇಳೆ ರಾಮ ಮಂದಿರದ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಮ್ ಲಲ್ಲಾ ವಿಗ್ರಹವನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ಪ್ರಸಿದ್ಧ ಮಳಿಗೆ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಅವರು, ಅರುಣ್ ಯೋಗಿರಾಜ್ ಮತ್ತು ಅವರ ಕುಟುಂಬಕ್ಕೆ ವಿವಿಧ ಸಿಹಿ ತಿನಿಸುಗಳಿಂದ ತಯಾರಿಸಿದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.
ಅರುಣ್ ಯೋಗಿರಾಜ್ ಅವರ ರಾಮ್ ಲಲ್ಲಾ ವಿಗ್ರಹದ ಆಯ್ಕೆಯ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜನವರಿ 2ರಂದು ತಮ್ಮ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
"ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮನ ಮೂರ್ತಿಯನ್ನು ಅಯೋಧ್ಯೆಯ ಭವ್ಯವಾದ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಆಯ್ಕೆ ಮಾಡಲಾಗಿದ್ದು, ಇದು ರಾಜ್ಯದ ಸಮಸ್ತ ರಾಮಭಕ್ತರ ಹೆಮ್ಮೆ ಮತ್ತು ಸಂತೋಷವನ್ನು ಇಮ್ಮಡಿಗೊಳಿಸಿದೆ.ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದು ಯಡಿಯೂರಪ್ಪ ಹೇಳಿದ್ದರು.
ರಾಮ್ ಲಲ್ಲಾ ವಿಗ್ರಹವನ್ನು ಕೆತ್ತಿಸುವಲ್ಲಿನ ಸವಾಲುಗಳ ಕುರಿತು ಪಿಟಿಐ ಜೊತೆ ಮಾತನಾಡಿದ ಅರುಣ್ ಯೋಗಿರಾಜ್, "ವಿಗ್ರಹವು ಅದು ದೈವಿಕವೂ ಆಗಿರಬೇಕು, ಏಕೆಂದರೆ ಅದು ದೇವರ ಅವತಾರದ ಪ್ರತಿಮೆ ಆಗಿದೆ. ಜನರು ಪ್ರತಿಮೆಯನ್ನು ನೋಡಿ ದೈವತ್ವವನ್ನು ಅನುಭವಿಸಬೇಕು," ಎಂದು ಹೇಳಿದ್ದಾರೆ.
ಇನ್ನು ಮಗುವಿನ ಮುಖದ ಜೊತೆಗೆ ದೈವತ್ವದ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಆರರಿಂದ ಏಳು ತಿಂಗಳ ಹಿಂದೆ ನನ್ನ ಕೆಲಸವನ್ನು ಪ್ರಾರಂಭಿಸಿದೆ. ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಆಯ್ಕೆಗಿಂತ ಹೆಚ್ಚಾಗಿ ಜನರು ಅದನ್ನು ಮೆಚ್ಚಬೇಕು. ಆಗ ಮಾತ್ರ ನಾನು ಸಂತೋಷವಾಗಿರುತ್ತೇನೆ, ಎಂದು ಅವರು ಹೇಳಿದ್ದರು.












Click it and Unblock the Notifications