ಮೈಸೂರಿನಲ್ಲಿ ಮಾ.27ರ ಶುಕ್ರವಾರ ಆಟೋ ಮುಷ್ಕರ
ಮೈಸೂರು, ಮಾ. 25 : ಮೈಸೂರು ನಗರದಲ್ಲಿ ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಸಂಚಾರಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ ಆಟೋ ಚಾಲಕರು ಮಾ.27ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಮಾ.26ರ ರಾತ್ರಿಯಿಂದ ನಗರದಲ್ಲಿ ಆಟೋ ಸಂಚಾರ ಸ್ಥಗಿತಗೊಳ್ಳಲಿದೆ.
ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ ಮಾ.27ರ ಶುಕ್ರವಾರದ ಬಂದ್‌ಗೆ ಕರೆ ನೀಡಿದೆ. ನಗರದಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡುವ ಮೂಲಕ ಆಟೋ ಚಾಲಕರಿಗೆ ಜಿಲ್ಲಾಡಳಿತ ತೊಂದರೆ ಉಂಟುಮಾಡಿದೆ ಎಂದು ಆರೋಪಿಸಿ ಬಂದ್‌ಗೆ ಕರೆ ನೀಡಲಾಗಿದೆ. [ಕೆ.ಆರ್. ಆಸ್ಪತ್ರೆ ಬಳಿ ಪ್ರೀ ಪೇಯ್ಡ್ ಆಟೋ]

ನಗರದ 25 ಕಿ.ಮೀ. ವ್ಯಾಪ್ತಿಯಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿಗಳು ಆಟೋಗಳಂತೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶವಿಲ್ಲ. ಆದರೆ, ಮೈಸೂರು ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ 1500 ಕ್ಯಾಬ್‌ಗಳ ಸಂಚಾರಕ್ಕೆ ಅವಕಾಶ ನೀಡಿದೆ. [ಮೈಸೂರಿನಲ್ಲಿ ಆಟೋ ಪ್ರಯಾಣದರ 25ರೂಗೆ ಹೆಚ್ಚಳ]
ಜಿಲ್ಲಾಡಳಿತ ಈ ಕ್ರಮದಿಂದಾಗಿ ಮೈಸೂರು ನಗರದ ಸುಮಾರು 35, 000 ಆಟೋ ಚಾಲಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿ ಆಟೋ ಚಾಲಕರ ಸಂಘಗಳ ಒಕ್ಕೂಟ ಈ ಬಂದ್‌ಗೆ ಕರೆ ನೀಡಿದೆ. ಮಾ.26ರ ಮಧ್ಯರಾತ್ರಿ 12 ಗಂಟೆಯಿಂದ ಮಾ.27ರ ಮಧ್ಯರಾತ್ರಿ 12 ಗಂಟೆಯ ತನಕ ನಗರದಲ್ಲಿ ಆಟೋ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲು ಆಟೋ ಚಾಲಕರು ನಿರ್ಧರಿಸಿದ್ದಾರೆ.












Click it and Unblock the Notifications