ವಿಡಿಯೋ: ಚೀನಾದಲ್ಲಿ ವಿದ್ಯುತ್ ಘಟಕ ಕುಸಿದು 40 ಮಂದಿ ಸಾವು
ನಿರ್ಮಾಣ ಹಂತ ವಿದ್ಯುತ್ ಘಟಕ ಕಟ್ಟಡ ಕುಸಿದು 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚೀನಾದ ಬೀಜಿಂಗ್ ನಲ್ಲಿ ಗುರುವಾರ ನಡೆದಿದೆ.
ಬೀಜಿಂಗ್, ನವೆಂಬರ್, 24: ಚೀನಾದಲ್ಲಿ ನಿರ್ಮಾಣ ಹಂತದ ವಿದ್ಯುತ್ ಘಟಕ ಕಟ್ಟಡ ಕುಸಿದು ಬಿದ್ದ ಪರಿಣಾಮ ಕನಿಷ್ಠ 40 ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಪೂರ್ವ ಚೀನಾ ಪ್ರದೇಶದಲ್ಲಿರುವ ಜಿಯಾಂಗ್ಸಿ ಪ್ರಾಂತ್ಯದ ಫೆಂಗ್ ಚೆಂಗ್ ನಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ 7ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ದುರಂತ ಸಂಭವಿಸಿದೆ ಎಂದು ಕ್ಷಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಟ್ಟಡದ ಅವಶೇಷಗಳಡಿ ನೂರಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐದಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಚೀನಾದ ಕೈಗಾರಿಕಾ ಪ್ರದೇಶಗಳಲ್ಲಿ ಈ ರೀತಿಯ ದುರಂತಗಳು ಹೆಚ್ಚಾಗುತ್ತಿದ್ದು, ಸರ್ಕಾರ ಕೂಡಲೇ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸುತ್ತಿವೆ.












Click it and Unblock the Notifications