ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಹಸ್ತಪ್ರತಿ, ತಾಳೆಗರಿಗಳಿಗೂ ಆನ್ ಲೈನ್ ಭಾಗ್ಯ

ಮೈಸೂರು, ಜುಲೈ 19: ಹಸ್ತಪ್ರತಿ, ತಾಳೆಗರಿಗಳು ನಮ್ಮ ಇತಿಹಾಸ, ಪರಂಪರೆಯ ಸಂರಕ್ಷಕಗಳು. ನಮ್ಮ ನಾಡಿನ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿರುವ ಇವುಗಳನ್ನು ಜತನವಾಗಿ ಕಾಪಾಡಿಕೊಳ್ಳುವುದೂ ತುಂಬಾ ಮುಖ್ಯ.

ಈ ನಿಟ್ಟಿನಲ್ಲಿ ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯ ಹೊಸ ಹೆಜ್ಜೆಯನ್ನು ಇಡುತ್ತಿದೆ. ತನ್ನ ಗ್ರಂಥಾಲಯದಲ್ಲಿರುವ ಪ್ರಾಚೀನ ತಾಳೆಗರಿ, ಹಸ್ತಪ್ರತಿ ಹಾಗೂ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲು ತಯಾರಿ ನಡೆಸುತ್ತಿದೆ.

ವಿಶ್ವದಲ್ಲೇ ಹೆಚ್ಚು ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ಸಂಸ್ಥೆಯಲ್ಲಿ ಮೈಸೂರು ವಿವಿಯ ಪ್ರಾಚ್ಯವಸ್ತು ಸಂಶೋಧನಾಲಯ ಸಂಸ್ಥೆಯು ಒಂದು. ಕೇವಲ ಸಂಶೋಧಕರಿಗೆ ಮತ್ತು ವಿದ್ವಾಂಸರಿಗಷ್ಟೇ ಇದು ಸೀಮಿತವಾಗಿದ್ದು, ಇದರ ವ್ಯಾಪ್ತಿಯನ್ನು ಹೆಚ್ಚುಗೊಳಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

Archaeological Research Institute of Mysuru decided to digitalise Manuscripts

ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇರುವ ಜ್ಯೋತಿಷ್ಯ ಶಾಸ್ತ್ರ, ಆಯುರ್ವೇದ, ಚರಿತ್ರೆ, ರಾಜಕೀಯ ಹೀಗೆ ಹತ್ತು ಹಲವು ಮೌಲ್ಯಗಳ ಗ್ರಂಥಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮೈಸೂರು ವಿವಿ ಈ ಯೋಜನೆಯನ್ನು ರೂಪಿಸಿದೆ.

ಕೇಂದ್ರದಲ್ಲಿ ಇರುವ 70 ಸಾವಿರ ಹಸ್ತಪ್ರತಿಗಳು ಹಾಗೂ 40 ಸಾವಿರ ಪುಸ್ತಕಗಳ ಡಿಜಿಟಲೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಓಲೆ ಗರಿಗಳು ಹಾಗೂ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕೆಲಸಗಳು ನಡೆಯುತ್ತಿವೆ. ಇದಾದ ಬಳಿಕ ವೆಬ್ ಸೈಟ್ ರೂಪಿಸಿ ಅವುಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇದರಿಂದ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯಲ್ಲಿರುವ ತಾಳೆಗರಿಯ ಗ್ರಂಥಗಳನ್ನು ಯಾರು ಬೇಕಾದರೂ ಸುಲಭವಾಗಿ ಓದಲು ಅವಕಾಶವಾಗಲಿದೆ.

Archaeological Research Institute of Mysuru decided to digitalise Manuscripts

"ತಾಳೆಗರಿ ಪುಸ್ತಕಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿ, ಅದರಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿಳಿಸಲಾಗುತ್ತದೆ. ಅದನ್ನು ಸಂಪೂರ್ಣವಾಗಿ ಅಭ್ಯಸಿಸಬೇಕಾದರೆ ಆನ್ ಲೈನ್ ಮೂಲಕ ಬಾಡಿಗೆ ಪಡೆಯಬೇಕಾಗಿದೆ. ಅದಕ್ಕೆ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ತಾಳೆಗರಿ ಎರವಲು ಪಡೆಯಲು ಎಷ್ಟು ಹಣ ಪಾವತಿಸಬೇಕು ಎಂಬುದನ್ನು ವಿವಿ ನಿರ್ಧರಿಸಲಿದೆ" ಎಂದು ಸಂಸ್ಥೆಯ ನಿರ್ದೇಶಕ ಶಿವರಾಜಪ್ಪ ತಿಳಿಸಿದ್ದಾರೆ.

ಸಂಸ್ಕೃತ, ದೇವನಾಗರಿ ಲಿಪಿ, ಕನ್ನಡ, ತೆಲುಗು, ಮಲಯಾಳಂ, ತಮಿಳು ಹೀಗೆ ಹತ್ತು ಹಲವು ಭಾಷೆಗಳ ಹಸ್ತಪ್ರತಿಗಳು ವೆಬ್ ಸೈಟ್ ನಲ್ಲಿ ಅಪ್ಲೋಡ್ ಆಗುವುದರಿಂದ ಕುಳಿತಲ್ಲಿಯೇ ಮೊಬೈಲ್ ನಲ್ಲಿಯೂ ಓದಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+