ಮೈಸೂರು : ಪ್ರತಿವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತೆ
ಮೈಸೂರು, ಏ. 14 : ದಿನದ 24 ಗಂಟೆಯೂ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನೀರಿನ ಘಟಕಗಳು ಮೈಸೂರಿನ ಪ್ರತಿ ವಾರ್ಡ್‌ನಲ್ಲಿ ಸ್ಥಾಪನೆಯಾಗಲಿವೆ. ಪ್ರವಾಸಿ ಸ್ಥಳಗಳ ಸಮೀಪ ಈ ಘಟಕಗಳನ್ನು ಸ್ಥಾಪನೆ ಮಾಡಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
1 ರೂ.ಗೆ 20 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸುವ ಘಟಕಗಳು ಇದಾಗಿದ್ದು. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ಥಾಪನೆ ಮಾಡಿದ ಮಾದರಿಯಲ್ಲಿಯೇ ಕೆಲವೊಂದು ಬದಲಾವಣೆ ಮಾಡಿಕೊಂಡು ನಗರದ 65 ವಾರ್ಡ್‌ನಲ್ಲಿಯೂ ಘಟಕ ಸ್ಥಾಪನೆ ಮಾಡಲಾಗುತ್ತದೆ. [ಮಾರುಕಟ್ಟೆಗೆ ಬರಲಿದೆ ಕೆಎಂಎಫ್ ಮಿನರಲ್ ವಾಟರ್]

6 ಕೋಟಿ ಅನುದಾನ ಬಿಡುಗಡೆ : ಮೈಸೂರು ಮಹಾನಗರ ಪಾಲಿಕೆ ಘಟಕ ಸ್ಥಾಪನೆ ಮಾಡಲು 6.5 ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಒಂದು ಘಟಕ ನಿರ್ಮಾಣ ಮಾಡಲು ಸುಮಾರು 10 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. [ಬೆಂಗಳೂರಲ್ಲಿ ಎಷ್ಟು ವಾಟರ್ ಬಿಲ್ ಕಟ್ಟುವಿರಿ?]
ಪ್ರತಿವಾರ್ಡ್‌ನಲ್ಲಿರುವ ಪ್ರವಾಸಿ ಸ್ಥಳಗಳ ಸಮೀಪ ಈ ಘಟಕಗಳನ್ನು ಸ್ಥಾಪನೆ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. ಮೈಸೂರು ಅರಮನೆ, ಮೃಗಾಲಯ, ಸೆಂಟ್ ಫಿಲೋಮಿನಾ ಚರ್ಚ್ ಮುಂತಾದ ಸ್ಥಳಗಳ ಸಮೀಪ ಘಟಕಗಳು ನಿರ್ಮಾಣವಾಗಲಿವೆ.
ದಿನದ 24 ಗಂಟೆಯೂ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ಒದಗಿಸಲುವ ಉದ್ದೇಶದಿಂದ ಈ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಪಾಲಿಕೆ ಆಯಕ್ತರ ಜೊತೆ ಚರ್ಚೆ ನಡೆಸಿದ ಬಳಿಕ ಘಟಕ ಸ್ಥಾಪನೆ ಸ್ಥಳವನ್ನು ನಿಗದಿಪಡಿಸಲಾಗುತ್ತದೆ.












Click it and Unblock the Notifications