ಮೈಸೂರು-ಚೆನ್ನೈ ನಡುವೆ ಮತ್ತೊಂದು ಹೊಸ ರೈಲು

ಮೈಸೂರು, ಜನವರಿ 8 : ಮೈಸೂರಿಗರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ರಾತ್ರಿ ಸಂಚಾರದ ಜೊತೆಗೆ ಹಗಲಿನಲ್ಲಿ ಪ್ರಯಾಣಿಸುವವರಿಗಾಗಿ ಮತ್ತೊಂದು ರೈಲು ಸೇವೆ ಶೀಘ್ರವೇ ಆರಂಭವಾಗಲಿದೆ.

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ರೈಲನ್ನು ಮೈಸೂರಿನವರೆಗೆ ವಿಸ್ತರಿಸಲು ಸೌತ್ ವೆಸ್ಟರ್ನ್ ರೈಲ್ವೆ ನಿರ್ಧರಿಸಿದ್ದು, ಇತ್ತೀಚೆಗೆ ಈ ಕುರಿತು ರೈಲ್ವೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರೈಲು ಸಂಖ್ಯೆ 12609 ಚೆನ್ನೈನಿಂದ 1.35 ಗಂಟೆಗೆ ಹೊರಡಲಿದ್ದು, 8.5ಕ್ಕೆ ಬೆಂಗ ಳೂರಿಗೆ ತಲುಪಲಿದೆ. ಬಳಿಕ ಅಲ್ಲಿಂದ ರಾತ್ರಿ 11 ಗಂಟೆಗೆ ಮೈಸೂರು ತಲುಪಲಿದೆ.

ಮೈಸೂರಿನಿಂದ ಮುಂಜಾನೆ 4.30ಕ್ಕೆ ಹೊರಟು ಚೆನ್ನೈಗೆ ಮಧ್ಯಾಹ್ನ 2.35ಕ್ಕೆ ತಲುಪಲಿದೆ. ಹಗಲು ಹೊತ್ತಿನಲ್ಲಿ ಈ ಭಾಗದಲ್ಲಿ ರೈಲು ಸೇವೆ ಆರಂಭಿಸಬೇಕು ಎಂಬುದು ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಈಗ ಈ ಬೇಡಿಕೆ ನೆರವೇರಿದೆ.

Another new train will run between Mysore and Chennai

ಹೆಚ್ಚಿನ ಪ್ರಯಾಣಿಕರು ಚೆನ್ನೈನಿಂದ ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣಿಸುತ್ತಿದ್ದಾರೆ. ಬಳಿಕ ಅಲ್ಲಿಂದ ಮೈಸೂರಿಗೆ ಬಸ್ ನಲ್ಲಿ ಸಂಚರಿಸುತ್ತಾರೆ. ಆದರೆ, ಸಂಜೆ ವೇಳೆಯಲ್ಲಿ ಬಸ್ ನಲ್ಲಿ ಪ್ರಯಾಣಿಸೋದು ಪೀಕ್ ಅವರ್ ಟ್ರಾಫಿಕ್ ನಲ್ಲಿ ಸಿಲುಕುವುದರಿಂದ ಸಂಕಷ್ಟಪಡುವಂತಾಗುತ್ತದೆ.

ಈಗ ಚೆನ್ನೈ -ಬೆಂಗಳೂರು ಎಕ್ಸ್ ಪ್ರೆಸ್ ರೈಲು ಮೈಸೂರಿನವರೆಗೂ ವಿಸ್ತರಿಸುವುದರಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+