ಅಮೆರಿಕ ಜೋಡಿಗೆ ಮೈಸೂರಿನಲ್ಲಿ ಸಂಪ್ರದಾಯಬದ್ಧ ನಿಶ್ಚಿತಾರ್ಥ
ಮೈಸೂರು: ಅಮೆರಿಕಾದ ಜೋಡಿಯೊಂದ ಭಾರತೀಯ ಸಂಪ್ರದಾಯಕ್ಕೆ ಮನಸೋತು, ಮೈಸೂರಿನಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡು, ಮತ್ತೆ ತಮ್ಮ ದೇಶಕ್ಕೆ ತೆರಳಿದ್ದಾರೆ.
ಅಮೆರಿಕದ ಇಂಕಾ ರಾಜ ಮನೆತನದ ಸದಸ್ಯರಲ್ಲೊಬ್ಬರಾದ ಕಲ್ಕಿ ಹೆನ್ರಿಕ್ ಹಾಗೂ ಅಮೆರಿಕಾದ ಎಸ್ಸಾ ಜೆಸ್ನಿಯಾ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ ವೇದಗಳ ಅಧ್ಯಯನ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದರು.[ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ]

ಈ ಜೋಡಿ ಇಲ್ಲಿನ ಭಾರತೀಯ ಸಂಪ್ರದಾಯಗಳ ಅಧ್ಯಯನ ಮಾಡುವ ವೇಳೆ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ, ವಿವಾಹ ಹಾಗೂ ಪುರೋಹಿತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶಾಸ್ತ್ರಗಳ ಬಗ್ಗೆ ಅರಿತು ಕೊಂಡಿದ್ದರು. ಈ ಎಲ್ಲ ಸಂಪ್ರದಾಯಕ್ಕೆ ಮಾರುಹೋಗಿ ಇಲ್ಲಿಯೇ ನಿಶ್ಚತಾರ್ಥ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದ್ದರು.[ಎಚ್1ಬಿ ವೀಸಾ : ಭಾರತದ ಐಟಿ ಇಂಡಸ್ಟ್ರಿಗೆ ಕೆಟ್ಟ ಸುದ್ದಿ]













Click it and Unblock the Notifications