ಮೈಸೂರು ನಗರದಲ್ಲಿ ಎಲ್ಲಾ ಟೀ ಅಂಗಡಿಗಳು ಬಂದ್

ಮೈಸೂರು, ಜುಲೈ 16 : ಮೈಸೂರು ನಗರದಲ್ಲಿ ಕೋವಿಡ್ - 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ. ಮಹಾನಗರ ಪಾಲಿಕೆ ಸೋಂಕು ತಡೆಯಲು ಶ್ರಮಿಸುತ್ತಿದೆ.

ಮೈಸೂರು ನಗರದ ಟೀ ಅಂಗಡಿಗಳಲ್ಲಿ ಮತ್ತು ಫುಟ್‌ಪಾತ್‌ನ ಟೀ ವ್ಯಾಪಾರಿ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಅನಗತ್ಯವಾಗಿ ಗುಂಪು ಸೇರುತ್ತಿದ್ದಾರೆ.

ಟೀ ಅಂಗಡಿಗಳ ಮುಂದೆ ಜನರು ಗುಂಪು ಸೇರಿ ಬೀಡಿ, ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಜನರು ಮಾಸ್ಕ್ ಧರಿಸದಿರುವ ಪ್ರಕರಣಗಳು ಪತ್ತೆಯಾಗಿವೆ.

All Tea Stall In Mysuru City To Close

ಹೆಚ್ಚಿನ ವ್ಯಾಪಾರಿಗಳು ಶುಚಿತ್ವವನ್ನು ಸಹ ಕಾಪಾಡುತ್ತಿಲ್ಲ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಜುಲೈ 16ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ಟೀ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಈ ಕುರಿತು ಆದೇಶ ಹೊರಡಿಸಿದೆ. ನಗರದ ಎಲ್ಲಾ ಟೀ ಅಂಗಡಿ, ಎಲ್ಲಾ ಫುಟ್‌ಪಾತ್ ಟೀ ಅಂಗಡಿಗಳನ್ನು ಸಹ ಮುಂದಿನ ಆದೇಶದ ತನಕ ಮುಚ್ಚಬೇಕು ಎಂದು ಸೂಚಿಸಲಾಗಿದೆ.

ಮೈಸೂರು ನಗರದ ಎಲ್ಲಾ ಟೀ ಅಂಗಡಿಗಳು ಹಾಗೂ ಎಲ್ಲಾ ಪುಟ್ ಪಾತ್ ಟೀ ಅಂಗಡಿಗಳನ್ನು ಸಹ ನಿರ್ಬಂಧಿಸಿ ಆದೇಶಿಸಿದೆ. ಮೈಸೂರು ನಗರದಲ್ಲಿ ಇಂದು ಸಹ 130 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+