ಮೈಸೂರಿನಿಂದ ನಗರ, ಪಟ್ಟಣಕ್ಕೂ ಎಸಿ ಬಸ್ ಸೇವೆ; ಮಾರ್ಗಗಳು ಮತ್ತು ದರ

ಮೈಸೂರು, ಸೆಪ್ಟೆಂಬರ್ 12; ಕೆಎಸ್ಆರ್‌ಟಿಸಿ ಮೈಸೂರು ನಗರ ಹಾಗೂ ಪಟ್ಟಣಗಳಿಗೆ ಸಂಚಾರ ನಡೆಸುವ ಮಾರ್ಗದಲ್ಲಿ ಹವಾನಿಯಂತ್ರಿತ ವೋಲ್ವೊ ಬಸ್ ಸೇವೆಯನ್ನು ಆರಂಭಿಸಿದೆ. ಆಯ್ದ ಮಾರ್ಗದಲ್ಲಿ ಈ ಸೇವೆಯನ್ನು ಇದೇ ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ.

ಪ್ರಯಾಣಿಕರಿಗೆ ಆರಾಮದಾಯಕ ಬಸ್ ಸೇವೆ ಒದಗಿಸಲು ಇದೇ ಮೊದಲ ಬಾರಿಗೆ ಹವಾನಿಯಂತ್ರಿತ ಬಸ್ ಸೇವೆಯನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಎಕ್ಸ್‌ಪ್ರೆಸ್ ಪ್ರಯಾಣದರಕ್ಕಿಂತ 5, 10 ರೂ. ಹೆಚ್ಚು ನೀಡಿ ಜನರು ಸಂಚಾರ ನಡೆಸಬಹುದು.

ಮೈಸೂರು ನಗರದ 22 ಆಯ್ದ ಮಾರ್ಗಗಳು ಹಾಗೂ ನಗರದಿಂದ ಪಟ್ಟಣ ಕೇಂದ್ರಗಳಿಗೆ ಸಂಪರ್ಕಿಸುವ ಮಾರ್ಗದಲ್ಲಿ ಹವಾನಿಯಂತ್ರಿತ ವೋಲ್ವೊ ಬಸ್‌ಗಳು ಸಂಚಾರ ನಡೆಸಲಿವೆ. ಈ ಮೂಲಕ ಮೈಸೂರಿಗೆ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.

ಇದು ಪ್ರಾಯೋಗಿಕ ಸೇವೆಯಾಗಿದೆ, ಪ್ರಯಾಣಿಕರಿಂದ ಉತ್ತಮ ಸ್ಪಂದನೆಯೂ ಸಿಗುತ್ತಿದೆ. ಮೈಸೂರು-ಚಾಮುಂಡಿ ಬೆಟ್ಟ, ಜೆ. ಪಿ. ನಗರ, ಇನ್ಪೋಸಿಸ್‌, ಎಲ್‌ ಅಂಡ್ ಟಿ ಸೇರಿದಂತೆ ವಿವಿಧ ಮಾರ್ಗದಲ್ಲಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಜನರು ಸಹ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್ಆರ್‌ಟಿಸಿಗೆ ಆದಾಯ

ಕೆಎಸ್ಆರ್‌ಟಿಸಿಗೆ ಆದಾಯ

ಕೋವಿಡ್ ಪರಿಸ್ಥಿತಿ ಬಳಿಕ ಕೆಎಸ್ಆರ್‌ಟಿಸಿಯೂ ಆದಾಯವಿಲ್ಲದೆ ಸೊರಗಿದೆ. ಈಗ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನರನ್ನು ನಗರ ಸಾರಿಗೆಯತ್ತ ಸೆಳೆಯಲು ಈ ಹವಾನಿಯಂತ್ರಿತ ವೋಲ್ವೊ ಬಸ್ ಸೇವೆ ಆರಂಭಿಸಲಾಗಿದೆ.

ಅಲ್ಲದೇ ಈಗ ದಸರಾ ಸಂದರ್ಭವಾಗಿದೆ. ಮೈಸೂರಿಗೆ ಹೆಚ್ಚಿನ ಪ್ರವಾಸಿಗರು ಸಹ ಭೇಟಿ ನೀಡುತ್ತಾರೆ. ಆದ್ದರಿಂದ ವೋಲ್ವೊ ಬಸ್ ಸೇವೆ ಆರಂಭಿಸಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

5 ರಿಂದ 10 ರೂ. ದರ ಹೆಚ್ಚು

5 ರಿಂದ 10 ರೂ. ದರ ಹೆಚ್ಚು

ಹವಾನಿಯಂತ್ರಿತ ವೋಲ್ವೊ ಬಸ್ ಪ್ರಯಾಣ ದರ ಜನರಿಗೆ ಹೊರೆ ಆಗುವುದಿಲ್ಲ. ಈಗಾಗಲೇ ಬಸ್ ಸೇವೆ ಆರಂಭಿಸಿ ಒಂದು ವಾರ ಕಳೆದಿದೆ. ಜನರು ಸಹ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಸಂಚಾರ ನಡೆಸುತ್ತಿರುವ ಎಕ್ಸ್‌ಪ್ರೆಸ್ ಬಸ್ ದರಕ್ಕಿಂತ ಹೆಚ್ಚುವರಿಯಾಗಿ 5 ರಿಂದ 10 ರೂ. ನೀಡುವ ಮೂಲಕ ಎಸಿ ಬಸ್‌ಗಳಲ್ಲಿ ಸಂಚಾರ ನಡೆಸಬಹುದಾಗಿದೆ. ಮೈಸೂರು ವಿಭಾಗದಲ್ಲಿ ಒಟ್ಟು 32 ವೋಲ್ವೊ ಬಸ್‌ಗಳಿವೆ. ಅವುಗಳನ್ನು ಆಯ್ದ ಮಾರ್ಗದಲ್ಲಿ ಓಡಿಸಲಾಗುತ್ತಿದೆ.

ಯಾವ-ಯಾವ ಮಾರ್ಗಗಳು?

ಯಾವ-ಯಾವ ಮಾರ್ಗಗಳು?

ಮೈಸೂರು ನಗರ ಸಾರಿಗೆ ವಿಭಾಗ ಚಾಮುಂಡಿಬೆಟ್ಟಕ್ಕೆ 6, ಇನ್ಫೋಸಿಸ್ ಹಾಗೂ ಎಲ್‌ ಅಂಡ್‌ ಟಿ ಮಾರ್ಗಕ್ಕೆ 4, ಜೆಪಿ ನಗರ 2, ನಂಜನಗೂಡು 4, ಮಳವಳ್ಳಿ 4, ಹುಣಸೂರು, ಪಿರಿಯಾಪಟ್ಟಣ ಮತ್ತು ಕುಶಾಲನಗರ ಮಾರ್ಗಕ್ಕೆ 2 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಕೆ. ಆರ್. ನಗರ ಮಾರ್ಗಕ್ಕೆ 2 ಬಸ್ ನಿಯೋಜನೆ ಮಾಡಲಾಗಿದೆ. ಇನ್ನು 10 ವೋಲ್ವೊ ಬಸ್‌ಗಳು ಬಾಕಿ ಉಳಿದಿವೆ. ಮೈಸೂರು ದಸರಾ ಸಂದರ್ಭದಲ್ಲಿ ನಗರ ದರ್ಶನಿ ಸೇವೆ ನೀಡಲು ಈ ಬಸ್ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್ ಪ್ರಯಾಣ ದರದ ಮಾಹಿತಿ

ಬಸ್ ಪ್ರಯಾಣ ದರದ ಮಾಹಿತಿ

ಎಸಿ ವೋಲ್ವೊ ಬಸ್‌ ದರ ಅಧಿಕವಾಗಿ ಜನರಿಗೆ ಹೊರೆ ಆಗುವಂತಿಲ್ಲ. ಮೈಸೂರು-ಕೆ. ಆರ್. ನಗರ 50 ರೂ., 60 ರೂ. ಇದೆ. ಮೈಸೂರು-ಮಳವಳ್ಳಿ ಮಾರ್ಗ 50 ರೂ., 60 ರೂ. ಇದೆ. ಮೈಸೂರು-ಹುಣಸೂರು ಮಾರ್ಗ 50 ರೂ., 60 ರೂ. ಇದೆ.

ಮೈಸೂರು-ನಂಜನಗೂಡು ಮಾರ್ಗ 37 ರೂ., 50 ರೂ. (5 ರೂ. ಟೋಲ್ ಶುಲ್ಕ ಸೇರಿ). ಚಾಮುಂಡಿಬೆಟ್ಟ, ಇನ್ಫೋಸಿಸ್ ಹಾಗೂ ಎಲ್ ಅಂಡ್ ಟಿ, ಜೆ. ಪಿ. ನಗರ ಮಾರ್ಗದಲ್ಲಿ ಸಿಟಿ ಬಸ್‌ಗಿಂತ 5 ರೂ., 10 ರೂ. ಹೆಚ್ಚು ದರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+