ಅಮೆರಿಕ ತಲುಪಿದ ಅಭಿಷೇಕ್ ಕುಟುಂಬ; ಅಂತ್ಯಕ್ರಿಯೆ ಬಗ್ಗೆ ತೀರ್ಮಾನ
ಮೈಸೂರು, ಡಿಸೆಂಬರ್ 6: ದುಷ್ಕರ್ಮಿಯಿಂದ ಹತ್ಯೆಗೊಳಗಾದ ಮೈಸೂರಿನ ಯುವಕ ಅಭಿಷೇಕ್ ಪಾಲಕರು ಇಂದು ಬೆಳಗಿನ ಜಾವ ಅಮೆರಿಕದ ಲಾಸ್ ಏಂಜಲೀಸ್ ತಲುಪಿದ್ದಾರೆ.
ಭಾರತೀಯ ಎಂಬಸಿ ಮನವಿಯಂತೆ ಮೃತ ಅಭಿಷೇಕ್ ನ ಮರಣೋತ್ತರ ಪರೀಕ್ಷೆಯನ್ನು ಕೂಡ ಈಗಾಗಲೇ ಪೂರೈಸಲಾಗಿದ್ದು ಪಾರ್ಥಿವ ಶರೀರವನ್ನು ಚಾಪೆಲ್ ಫ್ಯುನರಲ್ ಹೋಮ್ ಗೆ ರವಾನಿಸಲಾಗಿದೆ.

ಮರಣಪತ್ರದ ಅಧಿಕೃತ ಪ್ರತಿಗಾಗಿ ಫ್ಯುನರಲ್ ಹೋಮ್ ನಿರ್ದೇಶಕ ಬ್ರ್ಯಾಂಡನ್ ಕಾಯುತ್ತಿದ್ದು, ನಂತರ ಮುಂದಿನ ವಿಧಿವಿಧಾನಗಳಿಗೆ ಅಣಿಗೊಳಿಸಲಾಗುತ್ತದೆ. ಈ ಹಿಂದೆ ಅಮೆರಿಕಕ್ಕೆ ಹೋಗಲು ಕುಟುಂಬಕ್ಕೆ ವೀಸಾ ತೊಂದರೆ ಎದುರಾಗಿತ್ತು. ಇಂದು ಅಭಿಷೇಕ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೃತನ ತಂದೆ ಸುದೇಶ್, ತಾಯಿ ನಂದಿನಿ, ಕಿರಿಯ ಸೋದರ ಅಭಿಶ್ರೇಷ್ಠ ಅಂತ್ಯಕ್ರಿಯೆ ಬಗ್ಗೆ ತೀರ್ಮಾನಿಸಲಿದ್ದಾರೆ.
ಅಮೆರಿಕಾದಲ್ಲಿ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದ ಮೈಸೂರು ಮೂಲದ ಯುವಕ ಅಭಿಷೇಕ್ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ನವೆಂಬರ್ 28ರಂದು ಬಲಿಯಾಗಿದ್ದರು.












Click it and Unblock the Notifications