ಮೈಸೂರು: ಪಾರ್ಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಮೈಸೂರು, ಮಾರ್ಚ್ 9: ಮೈಸೂರು ನಗರದಲ್ಲಿ ಮಂಗಳವಾರ ಅಪರೂಪದ ಹೆರಿಗೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ತಾಯಿಯೊಬ್ಬಳು ಉದ್ಯಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಮೈಸೂರು ನಗರದ ಹೃದಯ ಭಾಗದಲ್ಲಿರುವ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಕೊಡಗು ಮೂಲದ ಮಹಿಳೆ ಪಾರ್ಕ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
ತುಂಬು ಗರ್ಭಿಣಿ ಆಗಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಪಾರ್ಕ್‌ನಲ್ಲಿ ಕುಳಿತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮಹಿಳೆ ಕಿರುಚಿದ್ದಾಳೆ.

ಈ ವೇಳೆ ಗರ್ಭಿಣಿ ಸಹಾಯಕ್ಕೆ ದೈಹಿಕ ಶಿಕ್ಷಕಿ ಶೋಭಾ ಎಂಬುವವರು ಧಾವಿಸಿದ್ದಾರೆ. ತುಂಬು ಗರ್ಭಿಣಿಯ ನೋವಿಗೆ ಸ್ಪಂದಿಸಿದ ಶಿಕ್ಷಕಿ, ಸ್ಥಳದಲ್ಲೇ ಹೆರಿಗೆ ಮಾಡಿಸಲು ಮುಂದಾದರು. ಒಂದು ಗಂಟೆ ಕಾಲ ಹೆರಿಗೆ ನೋವಿನಿಂದ ನರಳಿದ ನಂತರ ಮಗುವಿಗೆ ಜನ್ಮ ನೀಡಿದ್ದಾರೆ.












Click it and Unblock the Notifications