ಮೈಸೂರಿನಲ್ಲಿ ಹೆತ್ತಕೂಸಿನ ಕತ್ತು ಹಿಸುಕಿದಳು ನಿರ್ದಯಿ ತಾಯಿ
ನವಜಾತ ಹೆಣ್ಣು ಶಿಶುವನ್ನು ಸ್ವಂತ ತಾಯಿಯೇ ಹತ್ಯೆ ಮಾಡಿ, ತಾನು ಪರಾರಿಯಾಗಲು ಯತ್ನಿಸಿದ ಘಟನೆ ಮೈಸೂರು ಜಿಲ್ಲೆ, ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ನವಜಾತ ಹೆಣ್ಣು ಶಿಶುವನ್ನು ಸ್ವಂತ ತಾಯಿಯೇ ಹತ್ಯೆ ಮಾಡಿ, ತಾನು ಪರಾರಿಯಾಗಲು ಯತ್ನಿಸಿದ ಘಟನೆ ಮೈಸೂರು ಜಿಲ್ಲೆ, ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಇದೇ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಮಹಿಳೆಯೇ ಕೃತ್ಯವೆಸಗಿದ್ದಾಳೆಂಬುದು ತಿಳಿದುಬಂದಿದೆ. ಶಿಶು ಸತ್ತ ಬಳಿಕ ಮೃತ ದೇಹಕ್ಕೆ ಬಟ್ಟೆ ಮುಚ್ಚಿ ಬಚ್ಚಿಡಲು ಆಕೆ ಯತ್ನಿಸಿದ್ದು, ಶಿಶುವಿನ ಶವ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದೆ. ಬಳಿಕ ಹತ್ಯೆಮಾಡಿದ ಮಹಿಳೆ ವಾಂತಿ ಬೇಧಿಯಾಗಿದೆ ಎಂದು ಹೇಳಿ ವೈದ್ಯರನ್ನು ಯಾಮಾರಿಸಿದ್ದಾಳೆ. ಬಳಿಕ ಸತ್ಯ ತಿಳಿದು ಬಂದಿದ್ದು, ನಂತರ ತಾನೇ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.[ಮದ್ಯದ ಅಮಲಿನಲ್ಲಿ ಹೆತ್ತಕೂಸನ್ನೇ ಬೆಂಕಿಗೆಸೆದ ತಾಯಿ!]
ಈ ಕುರಿತು ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click it and Unblock the Notifications