ಬಾಲಕಿ ಮೇಲೆ ರೇಪ್ ಮಾಡಿದ ರಿಯಾಲಿಟಿ ಶೋ ಸ್ಟಾರ್
ಹುಣಸೂರು, ಜು.1: ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಗಿರಿಜನ ಯುವಕನೊಬ್ಬ ತನ್ನದೇ ಹಾಡಿಯ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ ಗಿರಿಜನ ಹಾಡಿಯ ಜೇನು ಕುರುಬ ಸಮುದಾಯಕ್ಕೆ ಸೇರಿದ 13 ವರ್ಷದ ಬಾಲಕಿ ಮೇಲೆ ಅದೇ ಗ್ರಾಮದ ಸೋಮಶೇಖರ್ ಎಂಬ 30 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸೋಮ ಅಲಿಯಾಸ್ ಸೋಮಶೇಖರ್ (25) ಅತ್ಯಾಚಾರ ನಡೆಸಿದ ಆರೋಪ ಹೊತ್ತಿದ್ದಾನೆ. ಹಳ್ಳಿ ಹೈದ ಪ್ಯಾಟೆಗ್ ಬಂದ ಶೋನ ಅಂತಿಮ ಸುತ್ತಿನ ತನಕ ತಲುಪಿದ್ದ ಸೋಮ ಕೊನೆಯಲ್ಲಿ ರಾಜೇಶ್ ವಿರುದ್ಧ ಸೋಲು ಕಂಡಿದ್ದ.

ಎಚ್ ಡಿ ಕೋಟೆಯ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿ ನಂತರ ಸಿನಿಮಾ ರಂಗಕ್ಕೂ ಜಿಗಿತ ರಾಜೇಶ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು ಎಲ್ಲರಿಗೂ ತಿಳಿದೇ ಇದೆ.
ಭಾನುವಾರ ಮನೆಯಲ್ಲೇ ಇದ್ದ ಬಾಲಕಿ ಮೇಲೆ ಮಧ್ಯಾಹ್ನ ಸೋಮ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಭಾನುವಾರ ರಾತ್ರಿ ಕುಟುಂಬಕ್ಕೆ ವಿಷಯ ಗೊತ್ತಾಗಿದೆ. ಈ ಸಂಬಂಧ ಬಾಲಕಿ ಪೋಷಕರು ಸೋಮು ವಿರುದ್ಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೆಟ್ಟಹಳ್ಳಿ ಹಾಡಿ ಗ್ರಾಮದ ವಿಕ್ರಮ್ ಮತ್ತು ಸುಶೀಲಾ ಗಿರಿಜನ ದಂಪತಿಯ ಮಗಳಾದ 8ನೆ ತರಗತಿ ವಿದ್ಯಾರ್ಥಿನಿ 13 ವರ್ಷದ ಶಶಿಕಲಾ ಎಂಬಾಕೆಯನ್ನು ಅದೇ ಗ್ರಾಮದ ಕಪಡಿರವರ ಮಗ ಸೋಮು ಬಾಲಕಿಯನ್ನು ಹೊತ್ತೊಯ್ದು ಭರತವಾಡಿ ಕಾಲುವೆ ಹತ್ತಿರ ಪೊದೆಯೊಂದರಲ್ಲಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಗ್ರಾಮಾಂತರ ಪಿಎಸೈ ರಾಘವೇಂದ್ರ ಪ್ರಕರಣ ದಾಖಲು ಮಾಡಿಕೊಂಡು ಎಸ್ಪಿಯವರ ಮಾರ್ಗದರ್ಶನದಲ್ಲಿ ಆರೋಪಿಯ ಪತ್ತೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications