ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ದಶಕದಿಂದ ತುಂಬದ ಕೆರೆ 3 ದಿನದ ಮಳೆಗೆ ಭರ್ತಿ

By Yashaswini
|
Google Oneindia Kannada News

ಮೈಸೂರು, ಮೇ 30 : ಮೈಸೂರಿನಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಕಳೆದ 55 ವರ್ಷಗಳಿಂದ ಪೂರ್ಣವಾಗಿ ತುಂಬದ ಕೆರೆಯೊಂದು 3 ದಿನಕ್ಕೆ ಸಂಪೂರ್ಣವಾಗಿ ಭರ್ತಿಯಾಗಿದೆ.

ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು. ಸತತ ಮೂರು ದಿನದ ಮಳೆ 55 ವರ್ಷದ ಬಳಿಕ ಗ್ರಾಮದ ಮಾದಯ್ಯನಕೆರೆ ತುಂಬಿ ತುಳುಕಿದೆ. ಕಳೆದ 5 ದಶಕಗಳಿಂದ ಸಂಪೂರ್ಣ ಕೆರೆ ಈ ರೀತಿ ನೀರಿನಿಂದ ತುಂಬಿರಲಿಲ್ಲ. ಇದಕ್ಕಾಗಿ ಹಲವು ಆಚರಣೆಗಳನ್ನ ನಡೆಸಿದ್ರು ಯಾವುದೇ ಪ್ರಯೋಜನ ಆಗಿರಲಿಲ್ಲ.[ಗೋಮಾಂಸ ನಿಷೇಧದಿಂದ ಮೈಸೂರು ಜೂ ಕಂಗಾಲು, ಮುಂದೇನು?]

A lake filled up after 55 years by contineous rains

ಇತ್ತೀಚೆಗೆ ಸರ್ಕಾರದ ವತಿಯಿಂದ ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಲಾಗಿತ್ತು. ಪರಿಣಾಮ ಕೆರೆಯಲ್ಲಿ 10 ರಿಂದ 11 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು 5 ದಶಕಗಳ ನಂತರ ಚುಂಚನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ನೀರಿನ ಬವಣೆಗೆ ಪರಿಹಾರ ಸಿಕ್ಕಿದಂತಾಗಿದೆ. ಕೆರೆಯ ಸುತ್ತಮುತ್ತ ಅಂತರ್ಜಲ ಪ್ರಮಾಣ ಸಹ ದಿಢೀರ್ ಹೆಚ್ಚಳವಾಗಿದ್ದು ಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು.[ಕಳೆದೆರಡು ದಿನಗಳಿಂದ ಮಳೆ, ನಂಜನಗೂಡಿನ ಹೆಡತಲೆ ಗ್ರಾಮ ಜಲಾವೃತ]

ನೀರು ತುಂಬಿದ್ದಕ್ಕಾಗಿ ವಿಶೇಷ ಆಚರಣೆಗೆ ಸಿದ್ಧವಾಗಿರುವ ಗ್ರಾಮಸ್ಥರು ಇನ್ನೆರಡು ದಿನದ ನಂತರ ವಿಶೇಷ ಹಬ್ಬ ನಡೆಸಿ ವಿಶೇಷ ಭೋಜನ ವ್ಯವಸ್ಥೆಆಯೋಜಿಸಲು ಸಿದ್ಧವಾಗುತ್ತಿದ್ದಾರೆ.

English summary
A lake in Chunchanahalli village of Nanjanagudu district which was empty since 55 years is filled with water from few heaby rains. The villagers became very happy and are in busy to organise a celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X