ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ರೈತ ಸಾವು, ಸಿದ್ದರಾಮಯ್ಯ ಸುಮ್ಮನಿರುವುದೇಕೆ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್, 25 : ಸದ್ಯಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಲ್ಲೇ ರೈತರು ಆತ್ಮಹತ್ಯೆ ಸರಣಿ ಮುಂದುವರೆಯುತ್ತಿದ್ದರೂ ಸುಮ್ಮನಿರುವುದೇಕೆ? ಎಂದು ಜನರ ಪ್ರಶ್ನೆಯಾಗಿದೆ

ಕೆಲ ದಿನಗಳ ಹಿಂದೆಯಷ್ಟೇ ಕೆ.ಆರ್.ನಗರದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಹಸಿಯಾಗಿರುವಾಗಲೇ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಂಡುವಾಡಿ ಗ್ರಾಮದ ಯುವ ರೈತ ಚಂದ್ರು (36) ಸಾಲಬಾಧೆ ತಾಳಲಾರದೆ ಮಂಗಳವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

A Farmer commits suicide in Hunsur Taluk, Mysuru

ರೈತ ಚಂದ್ರು ಈತನಿಗೆ ಒಂದೂವರೆ ಎಕರೆ ಖುಷ್ಕಿ ಜಮೀನಿದ್ದು, ಜಮೀನಿನ ಹೆಸರಲ್ಲಿ ವಿಜಯ ಬ್ಯಾಂಕ್ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ಸೇರಿದಂತೆ ಒಟ್ಟು 4 ಲಕ್ಷ ರೂ ಸಾಲ ಮಾಡಿದ್ದನು. ಇದರೊಂದಿಗೆ ಕೈಸಾಲವೂ ಇದ್ದಿದ್ದರಿಂದ ಸಾಲ ತೀರಿಸುವ ದಾರಿಕಾಣದೆ ಆತಂಕಕ್ಕೀಡಾಗಿದ್ದನು.[ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ]

ಈ ನಡುವೆ ಸಾಲಗಾರರು ಸಾಲ ಮರುಪಾವತಿಸುವಂತೆ ಕಾಟ ಹೆಚ್ಚಾಗಿದ್ದರಿಂದ, ಕೃಷಿ ಭೂಮಿ ಕೈಕೊಟ್ಟಿದ್ದರಿಂದ ಅನ್ಯ ಮಾರ್ಗ ಕಾಣದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A Farmer Chandru (36) committed suicide in Unduvaadi Village, Hunsur Taluk, Mysuru, on Tuesday, November 25th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X