ಗಂಡ ಹೆಂಡತಿ ಮಧ್ಯೆ ಜಗಳವಾದರೆ ಮಗುವಿಗೆ ಹೀಗೆ ಮಾಡುವುದಾ?

ಮೈಸೂರು, ಫೆಬ್ರವರಿ 18: ಗಂಡ ಹೆಂಡತಿ ಜಗಳ ತಾರಕಕ್ಕೇರಿ ಆರು ತಿಂಗಳ ಪುಟ್ಟ ಮಗುವನ್ನು ಮೋರಿಯಲ್ಲಿ ಬಿಸಾಡಿ ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ವಿದ್ಯಾರಣ್ಯಪುರಂನ ಸೂಯೆಜ್​ ಫಾರಂ ಸಮೀಪ ಇಂದು ಬೆಳಗ್ಗೆ ಮೋರಿಯೊಂದರಿಂದ ಮಗು ಅಳುತ್ತಿದ್ದ ಶಬ್ದ ಕೇಳಿಬಂದಿದೆ. ಆ ಶಬ್ದ ಕೇಳಿ ಬಂದ ನಿವಾಸಿಗಳಿಗೆ ಪುಟ್ಟ ಹೆಣ್ಣು ಮಗುವೊಂದು ಮೋರಿಯಲ್ಲಿ ಕಂಡುಬಂದಿದೆ. ಆ ಮಗುವನ್ನು ರಕ್ಷಿಸಿ ಹತ್ತಿರದ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಪೋಷಕರು ಹೀಗೆ ಬಿಟ್ಟು ಹೋಗಿದ್ದಾರೆ ಎಂದುಕೊಂಡು ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಇದಾದ ಕೆಲ ಸಮಯದ ನಂತರ ಮಗುವನ್ನು ಹುಡುಕಿಕೊಂಡು ತಂದೆ ಬಂದಿದ್ದಾರೆ. ಗಂಡ ಹೆಂಡತಿ ಜಗಳ ಹೆಚ್ಚಾಗಿ ಕೋಪಗೊಂಡ ಹೆಂಡತಿ ಮಗುವನ್ನು ಮೋರಿಗೆ ಬಿಸಾಡಿ ಹೋಗಿರುವುದಾಗಿ ತಿಳಿಸಿದ್ದಾರೆ.

6 Months Old Baby Found In Drainage Near Vidyaranyapuram

ಮಗುವಿಗಾಗಿ ಬೇಡಿಕೊಂಡ ಆತನನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಗುವನ್ನು ಮರಳಿಸುವಂತೆ ಪೊಲೀಸರ ಬಳಿ ಅಂಗಲಾಚಿದ್ದಾರೆ. ಗಂಡ ಹೆಂಡತಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+