ಮೈಸೂರು: ಕೊರೊನಾ ವೈರಸ್ ಜೊತೆಗೆ ಕಂಟೈನ್ಮೆಂಟ್ ವಲಯಗಳು ಏರಿಕೆ
ಮೈಸೂರು, ಜುಲೈ 13: ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕಂಟೈನ್ಮೆಂಟ್ ಝೋನ್ ಗಳು ಕೂಡಾ ಹೆಚ್ಚುತ್ತಲೇ ಇವೆ.
Recommended Video
ಭಾನುವಾರ 42 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಹತ್ತು ಹೊಸ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. 7 ನೇ ಮುಖ್ಯ ರಸ್ತೆ 4 ನೇ ಕ್ರಾಸ್ ವಿದ್ಯಾರಣ್ಯಪುರಂ, ರಾಜೀವ ನಗರ, ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರ 2 ನೇ ಹಂತ, ರಾಮಗೊಂಡನಹಳ್ಳಿ ಹನಗೋಡು ಹುಣಸೂರು, ಜಿ ಬ್ಲಾಕ್ ಕೆ.ಎಸ್.ಆರ್.ಟಿ.ಸಿ ಬನ್ನಿಮಂಟಪ ಮೈಸೂರು, 13 ನೇ ಕ್ರಾಸ್ ಗೌಸಿಯನಗರ, ಮೈಸೂರು.
ಬಿ ಕ್ವಾಟ್ರಸ್ 71 ಜ್ಯೋತಿ ನಗರ ಮೈಸೂರು, 2 ನೇ ಮುಖ್ಯ ರಸ್ತೆ ಬನ್ನಿಮಂಟಪ, ಮೈಸೂರು, ಲಕ್ಷ್ಮೀನಾರಾಯಣ ಶೆಟ್ಟಿ ನಂ 108 ಜಯಲಕ್ಷ್ಮಿಪುರಂ ಮೈಸೂರು, 1 ನೇ ಮುಖ್ಯ ರಸ್ತೆ 8ನೇ ಕ್ರಾಸ್ ಜೆಸಿ ನಗರ ಮಹಾಲಕ್ಷ್ಮಿ ಬಡಾವಣೆ, ಮೈಸೂರು, ಕೆ ಟಿ ಸ್ಟ್ರೀಟ್ 4 ನೇ ಕ್ರಾಸ್ ಮಂಡಿ ಮೊಹಲ್ಲಾ, ಮೈಸೂರು ಇವುಗಳನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕೊರೊನಾ ಪಾಸಿಟಿವ್ ನಿಂದ ಮೈಸೂರಿನಲ್ಲಿ ಭಾನುವಾರ 68 ವರ್ಷದ ವ್ಯಕ್ತಿ ಉದಯಗಿರಿ ನಿವಾಸಿ. ಜುಲೈ 11 ರಂದು ಸಂಜೆ 6.40 ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು ಮಧುಮೇಹ, ಅಧಿಕ ರಕ್ತದೊತ್ತಡ, ನ್ಯುಮೋನಿಯಾದಿಂದ ಬಳಲುತ್ತಿದ್ದವರು ಮೃತಪಟ್ಟಿದ್ದಾರೆ.
69 ವರ್ಷದ ವ್ಯಕ್ತಿ ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದವರು. ಜುಲೈ 11 ರಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಧಿಕ ರಕ್ತದೊತ್ತಡ, ಐಎಚ್ಡಿ ಹೃದಯ ಸಂಬಂಧಿ ಸಮಸ್ಯೆ ಮತ್ತು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಜುಲೈ 11 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
76 ವರ್ಷದ ವ್ಯಕ್ತಿ ಮೈಸೂರು ಜಿಲ್ಲೆ ಟಿ ನರಸೀಪುರದ ನಿವಾಸಿ ಜುಲೈ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 12 ರಂದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ತಿ.ನರಸೀಪುರ ತಾಲೂಕಿನಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ತಾಲೂಕಿನ ಗಾಣಿಗನಕೊಪ್ಪಲು ಗ್ರಾಮದ 76 ವರ್ಷದ ವ್ಯಕ್ತಿ ಹಾಗೂ ಬನ್ನೂರು ಪಟ್ಟಣದ ಬಿಸ್ಮಿಲ್ಲಾ ನಗರದ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ವೃದ್ಧರ ಸಾವಿನ ವರದಿ ಸೋಮವಾರ ಸಂಜೆ ಬಿಡುಗಡೆಯಾಗುವ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ನಲ್ಲಿ ಪ್ರಕಟವಾಗಲಿದೆ.
ಬನ್ನೂರು ಪಟ್ಟಣದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಮೂವರು ಪುರುಷರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೈಯಂಬಳ್ಳಿ ಗ್ರಾಮದ 27 ವರ್ಷದ ಯುವಕ ಹಾಗೂ ಬನ್ನಹಳ್ಳಿ ಹುಂಡಿ ಗ್ರಾಮದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ.












Click it and Unblock the Notifications