ಮೈಸೂರು ಮೃಗಾಲಯದ ಆದಾಯ 16 ಕೋಟಿಗೆ ಏರಿಕೆ
ಮೈಸೂರು, ಏ.4 : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 2014-15ನೇ ಸಾಲಿನಲ್ಲಿ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರಸಕ್ತ ವರ್ಷ ಮೃಗಾಲಯಕ್ಕೆ 16.21 ಕೋಟಿ ರೂ.ಗಳ ಆದಾಯ ಬಂದಿದೆ.
ಶ್ರೀ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳೇ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 2014-15ನೇ ಸಾಲಿನಲ್ಲಿ 31.63 ಲಕ್ಷ ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಮೃಗಾಲಯಕ್ಕೆ ಬಂದ ವಿರಾಟ್, ಬಬ್ಲಿ]

30 ಲಕ್ಷ ಭೇಟಿ : 2012-13ನೇ ಸಾಲಿನಲ್ಲಿ 30.36 ಲಕ್ಷ ಜನರು ಮೃಗಾಲಯಕ್ಕೆ ಬಂದಿದ್ದು, 12.2 ಕೋಟಿ ರೂ. ಆದಾಯ ಬಂದಿತ್ತು. 2013-14ನೇ ಸಾಲಿನಲ್ಲಿ 30.49 ಲಕ್ಷ ಜನ ಭೇಟಿನೀಡಿದ್ದರು. ಈ ಬಾರಿ ಪ್ರವಾಸಿಗರ ಸಂಖ್ಯೆ ಮತ್ತು ಆದಾಯ ಮತ್ತಷ್ಟು ಏರಿಕೆ ಕಂಡಿದೆ.[ಮೈಸೂರು ಮೃಗಾಲಯದಲ್ಲಿ ಶೀಘ್ರವೇ ವನ್ಯಜೀವಿ ಸಫಾರಿ]
17 ಲಕ್ಷ ಸಂಗ್ರಹ : ಮೈಸೂರು ದಸರಾ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. 2014 ಅಕ್ಟೋಬರ್ 4 ರಂದು ದಸರಾ ಮಹೋತ್ಸವದ ವೇಳೆ ಮೃಗಾಲಯಕ್ಕೆ 29,863 ಮಂದಿ ಪ್ರವಾಸಿಗರು ಬಂದಿದ್ದರು. ಅಂದು 17.61 ಲಕ್ಷ ಆದಾಯ ಸಂಗ್ರಹಣೆಯಾಗಿದೆ. [ಮೈಸೂರು ಮೃಗಾಲಯ ಸ್ವಲ್ಪ ದುಬಾರಿ]
ಪ್ರಾಣಿಪಾಲಕರಿಲ್ಲ : ಮೈಸೂರು ಮೃಗಾಲಯದ ಅಧ್ಯಕ್ಷರು ಮತ್ತು ನಿದೇರ್ಶಕರ ನಡುವಿನ ಅಸಮಾಧಾನದಿಂದಾಗಿ ಮೃಗಾಲಯದ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಾಣಿಪಾಲಕರು ನಿದೇರ್ಶಕರ ವಿರುದ್ಧ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾ.31ರಂದು ಗುತ್ತಿಗೆ ಅವಧಿ ಪೂರ್ಣಗೊಂಡ 45 ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಮೃಗಾಲಯದ ಅಧ್ಯಕ್ಷೆ ರಿಹಾನ್ ಬಾನು, ನಿದೇರ್ಶಕರಾಗಿರುವ ರವಿ ಅವರ ನಡುವಿನ ಅಸಮಾಧಾನದ ಕಾರಣದಿಂದ ಒಬ್ಬರು ಪ್ರಾಣಿಪಾಲಕರು ಮೂರು ಜನರ ಕಾರ್ಯವನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications