ಮೈಸೂರಿನಲ್ಲಿ 150 ಕೋಟಿ ರೂ. ಮೌಲ್ಯದ ಜಾಗ ಸರ್ಕಾರಿ ವಶಕ್ಕೆ

ಮೈಸೂರು, ಜನವರಿ 11: ನಗರದ ಕೇಂದ್ರ ಭಾಗದಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿದ್ದಾರೆ ಹಾಗೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಜಿಲ್ಲಾಡಳಿತ ಒತ್ತುವರಿಯನ್ನು ತೆರವುಗೊಳಿಸಿ ಸುಮಾರು 150 ಕೋಟಿ ರೂ. ಮೌಲ್ಯದ 11.38 ಎಕರೆ ಜಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ನಗರದ ಎಂಜಿ ರಸ್ತೆಯಲ್ಲಿ ಮಾಲ್ ಆಫ್ ಮೈಸೂರು ಪಕ್ಕದಲ್ಲಿರುವ ಟ್ಯಾಂಕ್ ಬಂಡ್ ರಸ್ತೆಯಲ್ಲಿ ದೊಡ್ಡಕೆರೆ ಟ್ಯಾಂಕ್ ಬಂಡ್ ನಿವೇಶನ ಮಾಲೀಕರ ಮತ್ತು ಅಭಿವೃದ್ಧಿ ಸಂಘದವರು 11.38 ಎಕರೆ ಪ್ರದೇಶಕ್ಕೆ ಹಾಕಿದ್ದ ಬೇಲಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ತಹಸೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆ ವೇಳೆ ನಿವೇಶನದ ಮಾಲೀಕರು ತಮ್ಮ ಬಳಿ ಇರುವ ದಾಖಲೆಗಳನ್ನು ಹಾಗೂ ನ್ಯಾಯಾಲಯದ ಆದೇಶ ಪ್ರತಿಗಳನ್ನು ತೋರಿಸಿ ದಿಢೀರ್ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ವಾಗ್ವಾದ ನಡೆಯಿತು. ಆದರೆ, ತೆರವು ಕಾರ್ಯಾಚರಣೆಗೆ ನಿವೇಶನದಾರರು ಅಡ್ಡಿಪಡಿಸಲಿಲ್ಲ.

150 crore Rs worth property have been acquired by the government

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ರಮೇಶ್ ಬಾಬು ಸರ್ವೆ ಸಂ.1ರಲ್ಲಿ ಇರುವ 11.38 ಎಕರೆ ಪ್ರದೇಶ ಸರ್ಕಾರಿ ದಾಖಲೆಗಳ ಪ್ರಕಾರ ಕಂದಾಯ ಇಲಾಖೆಗೆ ಸೇರಿದ್ದು, ಇಲ್ಲಿ ಅಕ್ರಮವಾಗಿ ಬೇಲಿ ನಿರ್ಮಿಸಲಾಗಿತ್ತು. ಹಾಗಾಗಿ ಇದನ್ನು ತೆರವುಗೊಳಿಸಲಾಯಿತು ಎಂದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾವು ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಸರ್ಕಾರಿ ಜಾಗ ಉಳಿಸುವುದು ನಮ್ಮ ಕರ್ತವ್ಯ. ಮುಡಾದಿಂದ ನಮಗೆ ಆದೇಶ ಬಂದರೂ ನಾವು ಇದಕ್ಕೆ ತಲೆ ಹಾಕುವುದಿಲ್ಲ. ಇವರು ಎಲ್ಲಾ ದಾಖಲೆಗಳು ಇವೇ ಎನ್ನುತ್ತಾರೆ. 50 ವರ್ಷದಿಂದ ಯಾಕೆ ಮನೆ ಕಟ್ಟಿಲ್ಲ? ಅವರು ಹಾಕಿರುವ ಫಲಕವನ್ನು ತೆರವು ಮಾಡಿದ್ದೇವೆ. ನಮ್ಮ ಇಲಾಖೆಯಿಂದ ನಾಮಫಲಕ ಹಾಕಿದ್ದೇವೆ ಎಂದು ತೆರವು ಕಾರ್ಯಾಚರಣೆ ಬಳಿಕ ರಮೇಶ್ ಬಾಬು ತಿಳಿಸಿದರು.

150 crore Rs worth property have been acquired by the government

"ನಮ್ಮ ಬಳಿ ಎಲ್ಲಾ ದಾಖಲಾತಿಗಳು ಇವೆ. ನಾವು ಪ್ರತಿವರ್ಷ ಕಂದಾಯ ಕಟ್ಟುತ್ತಿದ್ದೇವೆ. ಉಚ್ಚ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಎಂಜಿ ರಸ್ತೆ ವಿಸ್ತರಣೆ ಮಾಡುವಾಗ ನಮ್ಮ ಸಂಘದವರ 3 ನಿವೇಶನಗಳನ್ನು ಬಿಟ್ಟು ಕೊಟ್ಟಿದ್ದೇವೆ. ಇದರ ಬದಲಿಗೆ ನಮಗೆ ಬೇರೆ ಕಡೆ ಜಾಗವನ್ನು ಗುರುತು ಮಾಡಿದ್ದಾರೆ. ಈಗ ಇವರು ಬಂದು ತೆರವು ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ" ಎಂದು ಸಂಘದ ಅಧ್ಯಕ್ಷ ಅಚ್ಚುತ ಹೇಳಿದರು.

ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮೊಬೈಲ್ ಕಮಾಂಡರ್, ಎರಡು ಪೊಲೀಸ್ ವ್ಯಾನ್, ಅಶ್ವಾರೋಹಿ ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+