ಸರ್ಕಾರಿ ಶಾಲೆಯ 15 ಕಂಪ್ಯೂಟರ್ ಕದ್ದೊಯ್ದ ಕಳ್ಳರು
ಮೈಸೂರು, ಜುಲೈ 10: ಸರ್ಕಾರಿ ಶಾಲೆಯೊಂದರ ಕಿಟಕಿ ಮೂಲಕ ಒಳ ನುಗ್ಗಿದ ಕಳ್ಳರು ಅಲ್ಲಿದ್ದ 6.63 ಲಕ್ಷ ರೂಪಾಯಿ ಮೌಲ್ಯದ 16 ಕಂಪ್ಯೂಟರ್ ಗಳನ್ನು ಕಳವು ಮಾಡಿರುವ ಘಟನೆ ಮೈಸೂರಿನ ಹಿನಕಲ್ ನಲ್ಲಿ ನಡೆದಿದೆ. ಈ ಸಂಬಂಧ ಮುಖ್ಯ ಶಿಕ್ಷಕಿ ಪ್ರಮೀಳಾ ದೂರು ಸಲ್ಲಿಸಿದ್ದಾರೆ.
ಜುಲೈ 6ರಂದು ಶನಿವಾರ ಶಾಲೆ ಮುಗಿದ ನಂತರ ಬೀಗ ಹಾಕಿಕೊಂಡು ಎಲ್ಲರೂ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ 9 ಗಂಟೆಗೆ ಶಿಕ್ಷಕರು ಶಾಲೆಗೆ ಬಂದಾಗ ಶಾಲೆಯಲ್ಲಿರುವ ಕಂಪ್ಯೂಟರ್ ರೂಮಿನ ಕಿಟಕಿ ತೆರೆದಿರುವುದು ಕಾಣಿಸಿತ್ತು.

ಕಿಟಕಿ ಬಳಿ ಪರಿಶೀಲಿಸಿದಾಗ, ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಪ್ರವೇಶಿಸಿ ಹೊಸ 16 ಕಂಪ್ಯೂಟರುಗಳನ್ನು ಕದ್ದಿರುವುದು ತಿಳಿದುಬಂದಿದೆ. ಕೂಡಲೇ ಅವರು ವಿಜಯನಗರ ಪೊಲೀಸರಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.












Click it and Unblock the Notifications