ಬುಲೆಟ್ ರೈಲು ಯೋಜನೆ ಅನುಷ್ಠಾನಗೊಳ್ಳಲು ಬಿಡೆವು: ಠಾಕ್ರೆ
ಮುಂಬೈ, ಸೆಪ್ಟೆಂಬರ್ 30: ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈವರೆಗೆ ನಿರ್ಮಾಣವಾಗಲಿರುವ ಬುಲೆಟ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎಸ್ ಎನ್) ಅಧ್ಯಕ್ಷ ರಾಜ್ ಠಾಕ್ರೆ ಗುಡುಗಿದ್ದಾರೆ.
ನಗರದ ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸೆ. 29ರಂದು ಕಾಲ್ತುಳಿತಕ್ಕೆ ಸಿಲುಕಿ ಸುಮಾರು 23 ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ''ಮೋದಿ ಸರ್ಕಾರ ಮೊದಲು ಮುಂಬೈನ ರೈಲ್ವೆ ನಿಲ್ದಾಣಗಳಲ್ಲಿನ ಸಮಸ್ಯೆಗಳು ಬಗೆ ಹರಿಸಲಿ. ಆನಂತರ ಬುಲೆಟ್ ರೈಲಿನ ಬಗ್ಗೆ ಮಾತನಾಡಲಿ. ಇಲ್ಲವಾದರೆ, ಅವರ ಬುಲೆಟ್ ರೈಲಿನ ಯೋಜನೆ ಕಾರ್ಯಗತವಾಗಲು ಎಂಎಸ್ ಎನ್ ಬಿಡುವುದಿಲ್ಲ'' ಎಂದು ಗುಡುಗಿದ್ದಾರೆ.
ತಮ್ಮ ಮಾತನ್ನು ಮುಂದುವರಿಸಿರುವ ಅವರು, ''ಬುಲೆಟ್ ರೈಲು ಯೋಜನೆ ಅಂಗವಾಗಿ ಮುಂಬೈನಲ್ಲಿ ಕಟ್ಟಬೇಕಿರುವ ರೈಲು ನಿಲ್ದಾಣದ ಅಡಿಪಾಯಕ್ಕೆ ಒಂದು ಇಟ್ಟಿಗೆಯನ್ನೂ ಹಾಕಲು ನಾವು (ಎಂಎಸ್ ಎನ್) ಬಿಡುವುದಿಲ್ಲ. ಬುಲೆಟ್ ರೈಲು ಯೋಜನೆಯನ್ನು ಮೋದಿಯವರು ತಮ್ಮ ಸ್ವಂತ ರಾಜ್ಯವಾದ ಗುಜರಾತ್ ನಲ್ಲಿ ಮಾಡಿಕೊಳ್ಳಲಿ'' ಎಂದು ಅವರು ಎಚ್ಚರಿಕೆ ನೀಡಿದರು.

ಇಂಥ ಪ್ರಧಾನಿ ಬಂದಿರಲಿಲ್ಲ: ಠಾಕ್ರೆ
ಆನಂತರ, ತಮ್ಮ ಟೀಕಾಸ್ತ್ರವನ್ನು ಮೋದಿ ಕಡೆಗೆ ತಿರುಗಿಸಿದ ರಾಜ್ ಠಾಕ್ರೆ, ''ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಭಾರತ ಕಂಡಿಲ್ಲ'' ಎಂದರು.

ಸುಳ್ಳು ಹೇಳುವವರನ್ನು ನೋಡಿಲ್ಲ
ಆಶ್ವಾಸನೆಗಳನ್ನು ನೀಡುವುದು ಆನಂತರ, ಅವುಗಳನ್ನು ಚುನಾವಣಾ ಪ್ರಚಾರ ತಂತ್ರ ಎಂದು ತಳ್ಳಿ ಹಾಕುವುದು ಮಾಡುತ್ತಾರೆ. ಒಬ್ಬ ವ್ಯಕ್ತಿ ಇಷ್ಟು ಪ್ರಮಾಣದಲ್ಲಿ ಸುಳ್ಳು ಹೇಳುವುದನ್ನು ನಾನಂತೂ ನೋಡಿಲ್ಲ'' ಎಂದು ಅವರು ಆರೋಪಿಸಿದರು.

ಸುರೇಶ್ ಪ್ರಭುವೇ ಉತ್ತಮರಾಗಿದ್ದರು: ಠಾಕ್ರೆ
ಇತ್ತೀಚೆಗೆ ರೈಲ್ವೆ ಸಚಿವರಾಗಿ ನೇಮಕಗೊಂಡಿರುವ ಪಿಯೂಶ್ ಚಾವಲ್ ಅವರನ್ನೂ ಟೀಕಿಸಿದ ಅವರು, ''ಪಿಯೂಶ್ ಚಾವಲ್ ಒಬ್ಬ ನಿಷ್ಪ್ರಯೋಜಕ ಸಚಿವ. ಇವರಿಗಿಂತ ಮುಂಚೆ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಅವರೇ ರೈಲ್ವೆ ಇಲಾಖೆಯನ್ನು ಮುನ್ನಡೆಸುವಷ್ಟು ಸಮರ್ಥರಾಗಿದ್ದರು'' ಎಂದು ಅವರು ತಿಳಿಸಿದರು.

ಗಂಭೀರವಾಗಿ ಚಿಂತನೆ ಮಾಡಲಿಲ್ಲ
ಎಲ್ಪಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ಸೆ. 29ರಂದು ಸಂಭವಿಸಿದ ದುರಂತವನ್ನೂ ಮೊದಲೇ ಮನಗಂಡು ಇಲ್ಲೊಂದು ಹೊಸ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಈ ಹಿಂದೆಯೇ ಎಂಎಸ್ಎನ್ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿತ್ತು. ಆದರೆ, ಯಾರೂ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಲೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
-
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ












Click it and Unblock the Notifications