ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನ 'ಒಂದು ರುಪಾಯಿ ಕ್ಲಿನಿಕ್'ನಲ್ಲಿ ಹೀಗೊಂದು ಸುಖ ಪ್ರಸವ

By ಅನುಷಾ ರವಿ
|
Google Oneindia Kannada News

ಮುಂಬೈ, ಜುಲೈ 11: ಮುಂಬೈನಲ್ಲಿ ತೀರಾ ಹೆಸರುವಾಸಿ ಆಗುತ್ತಿರುವ 'ಒಂದು ರುಪಾಯಿ ಕ್ಲಿನಿಕ್' ನಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಘಾಟ್ಕೋಪರ್ ರೈಲು ನಿಲ್ದಾಣದಲ್ಲಿ ಮಂಗಳವಾರ ಮಹಾಲಕ್ಷ್ಮಿ ಬಂದಷ್ಟೇ ಸಂಭ್ರಮವಿತ್ತು.

ಗುಡಿಯಾ ಎಂಬ ಮಹಿಳೆ ಕೆಲಸಕ್ಕೆ ಹೋಗುವ ಸಲುವಾಗಿ ರೈಲಿಗೆ ಕಾಯುತ್ತಿದ್ದರು. ಆ ವೇಳೆ ನಿಲ್ದಾಣದಲ್ಲಿರುವ ಜನಸ್ನೇಹಿ ಕ್ಲಿನಿಕ್ ನಲ್ಲಿ ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತಿದ್ದಾರೆ. ತೀರಾ ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಮುಂಬೈನ ಸೆಂಟ್ರಲ್ ಲೈನ್ ನ ಸ್ಟೇಷನ್ ಗಳಲ್ಲಿ ಇಂಥ ಕ್ಲಿನಿಕ್ ಆರಂಭಿಸಲಾಗಿದೆ.

ರೈಲ್ವೇ ಪ್ಲಾಟ್ ಫಾರಂನಲ್ಲಿ ಹುಟ್ಟಿದ ಗಂಡು ಮಗುರೈಲ್ವೇ ಪ್ಲಾಟ್ ಫಾರಂನಲ್ಲಿ ಹುಟ್ಟಿದ ಗಂಡು ಮಗು

Woman delivers baby at Re 1 clinic in a Mumbai Railway station

ಇನ್ನು ಘಾಟ್ಕೋಪರ್ ನಿಲ್ದಾಣದಲ್ಲಿ ಕಳೆದ ಮೇನಲ್ಲಷ್ಟೇ ಕ್ಲಿನಿಕ್ ಆರಂಭವಾಗಿತ್ತು. "ನಮ್ಮ ಕ್ಲಿನಿಕ್ ಗಳಲ್ಲೇ ಮಗುವಿನ ಹೆರಿಗೆ ಮಾಡುತ್ತಿರುವುದು ಇದೇ ಮೊದಲು. ನಾಲ್ಕು ಮಂದಿಯ ತಂಡದಲ್ಲಿ ಇಬ್ಬರು ವೈದ್ಯರಿದ್ದು, ಹೆರಿಗೆಗೆ ನೆರವಾಗಿದ್ದಾರೆ. ಆ ಮಗು ಎರಡೂವರೆ ಕೇಜಿ ತೂಕವಿದೆ. ಮಗುವಿನ ಸ್ಥಿತಿ ಸ್ಥಿರವಾಗಿದೆ" ಎಂದು ವೈದ್ಯ ರಾಹುಲ್ ಘುಲೆ ಹೇಳಿದ್ದಾರೆ.

ಮಗುವಿಗೆ ಜನ್ಮ ನೀಡಿದ ಗುಡಿಯಾ ಹಾಗೂ ಆಕೆಯ ಪತಿ ಅಬ್ರಾರ್ ಖಾನ್ ದಾದರ್ ಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದರು. ಆಕೆಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ರೈಲು ನಿಲ್ದಾಣದ ಮೂರನೇ ಪ್ಲಾಟ್ ಫಾರ್ಮ್ ನಲ್ಲಿರುವ ಕ್ಲಿನಿಕ್ ಗೆ ಕರೆದೊಯ್ಯಲಾಗಿದೆ. ಹೆರಿಗೆ ನಂತರ ಹತ್ತಿರದ ಆಸ್ಪತೆಗೆ ಹೆಚ್ಚಿನ ನಿಗಾ ವಹಿಸಲು ಸೇರಿಸಲಾಗಿದೆ.

ರೈಲ್ವೇ ಇಲಾಖೆಯಿಂದಲೇ ಹಾಲು ತರಿಸಿಕೊಂಡು ಕುಡಿದ ಕಂದಮ್ಮ!ರೈಲ್ವೇ ಇಲಾಖೆಯಿಂದಲೇ ಹಾಲು ತರಿಸಿಕೊಂಡು ಕುಡಿದ ಕಂದಮ್ಮ!

ಈ ಕ್ಲಿನಿಕ್ ಗಳಲ್ಲಿ ಈ ವರೆಗೆ ಹನ್ನೆರಡು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಪಘಾತ, ಹೃದಯಾಘಾತ ಅಥವಾ ಇನ್ಯಾವುದೇ ತುರ್ತು ಸಮಯದಲ್ಲಿ ರೋಗಿಗಳ ಶುಶ್ರೂಷೆ ಮಾಡಲು ಈ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಇದಕ್ಕಾಗಿ ಸ್ಥಳವನ್ನು ಸರಕಾರ ಪುಕ್ಕಟೆ ನೀಡಿದೆ. ಜತೆಗೆ ನೀರು, ವಿದ್ಯುತ್ ಕೂಡ ಒದಗಿಸುತ್ತಿದೆ.

ಈ ಕ್ಲಿನಿಕ್ ನಲ್ಲಿ ಕನ್ಸಲ್ಟೇಷನ್ ಗೆ ಒಂದು ರುಪಾಯಿ ದರವಿದೆ. ಇತರ ಪರೀಕ್ಷೆ ಹಾಗೂ ಔಷಧಿಗಳಿಗೆ ಸಿಕ್ಕಾಪಟ್ಟೆ ರಿಯಾಯಿತಿ ಇದೆ. ಇಂಥ ಒಂದು ರುಪಾಯಿ ಕ್ಲಿನಿಕ್ ಗಳನ್ನು ಮುಂಬೈನ ಇನ್ನಷ್ಟು ಮೆಟ್ರೋ ನಿಲ್ದಾಣಗಳಲ್ಲಿ ಆರಂಭಿಸುವ ಉದ್ದೇಶ ಇದೆ.

ಒನ್ಇಂಡಿಯಾ ನ್ಯೂಸ್

English summary
Mumbai's famous Re 1 clinic turned into a blessing for a pregnant woman passenger at Ghatkopar railway station on Tuesday. Gudiya, who went into labour while waiting for a train, delivered a healthy baby girl at the people-friendly clinic set up in the station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X