ಉದ್ಯಮಿ ಮುಖೇಶ್ ಅಂಬಾನಿ ನಿವಾಸಕ್ಕೆ ದಿಢೀರ್ ಭದ್ರತೆ ಹೆಚ್ಚಳ: ಕಾರಣವೇನು?

ಮುಂಬೈ, ನವೆಂಬರ್ 8: ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸಕ್ಕೆ ಸೋಮವಾರ ದಿಢೀರ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬೈನ ಅಂಟಿಲಿಯಾ ನಿವಾಸದ ಸುತ್ತಮುತ್ತಲಿನಲ್ಲಿ ಇಬ್ಬರು ಶಂಕಿತರು ಮನೆಯ ಬಗ್ಗೆ ವಿಚಾರಿಸಿರುವುದು ಗೊತ್ತಾಗಿದೆ.

ಅಂಟಿಲಿಯಾ ನಿವಾಸದ ಸುತ್ತಲಿನ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದ್ದು, ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಏಕೆಂದರೆ ಮುಂಬೈನಲ್ಲಿ ಇರುವ ಮುಖೇಶ್ ಅಂಬಾನಿ ನಿವಾಸದ ಬಳಿ ಬಿಗಿ ಭದ್ರತೆ ನಡುವೆ ಇತ್ತೀಚೆಗಷ್ಟೇ ಸ್ಫೋಟಕಗಳನ್ನು ತುಂಬಿಸಿದ ವಾಹನವೊಂದು ಪತ್ತೆಯಾಗಿತ್ತು.

"ಇಬ್ಬರು ಶಂಕಿತ ವ್ಯಕ್ತಿಗಳು ಮುಖೇಶ್ ಅಂಬಾನಿಯವರ ಅಂಟಿಲಿಯಾ ನಿವಾಸದ ಬಗ್ಗೆ ವಿಚಾರಿಸಿದ್ದಾರೆ ಎಂದು ಒಬ್ಬ ಟ್ಯಾಕ್ಸಿ ಚಾಲಕರೊಬ್ಬರು ನಮಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು," ಎಂದು ಪೊಲೀಸರು ತಿಳಿಸಿದ್ದಾರೆ.

Why Business man Mukesh Ambanis Mumbai Home Gets More Security?

ಕೈಯಲ್ಲಿ ದೊಡ್ಡ ಬ್ಯಾಗ್ ಹಿಡಿದಿದ್ದ ಶಂಕಿತರು:

ಇಬ್ಬರೂ ವ್ಯಕ್ತಿಗಳು ತಮ್ಮ ಕೈಯಲ್ಲಿ ದೊಡ್ಡ ಬ್ಯಾಗ್ ಅನ್ನು ಹಿಡಿದುಕೊಂಡಿದ್ದು, ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಗ್ಗೆ ವಿಚಾರಿಸಿದರು ಎಂದು ಆ ತಕ್ಷಣಕ್ಕೆ ಟ್ಯಾಕ್ಸಿ ಚಾಲಕನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ಯಾಕ್ಸಿ ಚಾಲಕನ ಹೇಳಿಕೆಯನ್ನು ಪಡೆದುಕೊಳ್ಳಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫೆಬ್ರುವರಿಯಲ್ಲಿ ಸ್ಫೋಟಕ ತುಂಬಿಸಿದ ವಾಹನ ಪತ್ತೆ:

ಕಳೆದ ಫೆಬ್ರುವರಿ ತಿಂಗಳಿನಲ್ಲಿ ಸ್ಫೋಟಕಗಳನ್ನು ತುಂಬಿದ ಸ್ಕಾರ್ಪಿಯೋ ವಾಹನವು ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸದಿಂದ ಕಲವೇ ಕೆಲವು ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ವಾಹನದಲ್ಲಿ 20 ಜಿಲೆಟಿನ್ ಕಡ್ಡಿಗಳು ಮತ್ತು ಮುಖೇಶ್ ಮತ್ತು ನೀತಾ ಅಂಬಾನಿ ಅವರಿಗೆ ಬರೆದ ಪತ್ರ ಪತ್ತೆಯಾಗಿದ್ದು, ಅದರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಇನ್ನು ಕಾರಿನ ವಿವರವನ್ನು ಪರಿಶೀಲನೆ ನಡೆಸಿದಾಗ, ಈ ಕಾರು ಕಳ್ಳತನವಾಗಿದ್ದು, ಅಸಲಿ ಮಾಲೀಕನು ಕೊಲೆಯಾಗಿರುವ ಅಂಶ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿತ್ತು.

27 ಅಂತಸ್ತಿನ ಅಂಟಾಲಿಯಾ ನಿವಾಸದಲ್ಲಿ ವಾಸ:

ಕಳೆದ 2012 ರಿಂದಲೂ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬವು ದಕ್ಷಿಣ ಮುಂಬೈನ ಕುಂಬಲ್ಲಾ ಹಿಲ್ ಪ್ರದೇಶದಲ್ಲಿರುವ ಆಂಟಿಲಿಯಾ ಎಂಬ 27 ಅಂತಸ್ತಿನ 4,00,000 ಚದರ ಅಡಿಯ ಐಷಾರಾಮಿ ಕಟ್ಟಡದಲ್ಲಿ ವಾಸವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+