ನಮ್ಗೆ ಪರಿಹಾರ ಸಿಕ್ಕರೆ ಸಾಕು: ಅಪಘಾತದ ಸಂತ್ರಸ್ತರು
ಮುಂಬೈ, ಮೇ.6: ಬಾಲಿವುಡ್ ನಟ ಸಲ್ಮಾನ್ ಖಾನ್ ವಿಐಪಿಯಾಗಿರುವುದರಿಂದ ಕಾನೂನಿನ ಹೋರಾಟ 13 ವರ್ಷಗಳ ಕಾಲ ನಡೆದಿದೆ. ಮೃತ ವ್ಯಕ್ತಿಗೆ ಜೀವ ವಾಪಸ್ ಬರುವುದಿಲ್ಲ. ಅದರೆ, ಗಾಯಾಳುಗಳಿಗೆ ಸೂಕ್ತ ಪರಿಹಾರ ಸಿಕ್ಕಿದೆಯೇ? ಅನಗತ್ಯವಾಗಿ ಈ ಕೇಸ್ ವರ್ಷಾನುಗಟ್ಟಲೇ ಎಳೆದಾಡಲಾಯಿತೆ? ಎಂಬ ಚರ್ಚೆ ನಡೆದಿದೆ. ಈ ನಡುವೆ ತೀರ್ಪಿನ ಬಗ್ಗೆ ಸಂತ್ರಸ್ತರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ 5 ವರ್ಷ ಶಿಕ್ಷೆಯನ್ನು ಸೆಷನ್ಸ್ ಕೋರ್ಟ್ ಪ್ರಕಟಿಸಿದೆ.ಐಪಿಸಿ ಸೆಕ್ಷನ್ 304 II ಅಡಿಯಲ್ಲಿ ಆರೋಪ ಸಾಬೀತಾಗಿದೆ. 279 ಅಡಿಯಲ್ಲಿ 6 ತಿಂಗಳು ಜೈಲು ಶಿಕ್ಷೆ ನೀಡಬಹುದು. [ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ]
ಸೆಕ್ಷನ್ 337 ಹಾಗೂ 338 ಅಡಿಯಲ್ಲಿ ಹಾಗೂ 427 ಅನ್ವಯ 2 ವರ್ಷ ಜೈಲು ಶಿಕ್ಷೆ ಮತ್ತು ಕುಡಿದು ವಾಹನ ಚಲಾಯಿಸಿದ ತಪ್ಪಿಗೆ ಮತ್ತೆ 6 ವರ್ಷ ಹೀಗೆ ಶಿಕ್ಷೆ ಪ್ರಮಾಣ ಹಿಗ್ಗುತ್ತಲೇ ಹೋಗುತ್ತದೆ. 10 ವರ್ಷದ ಶಿಕ್ಷೆ 5 ವರ್ಷಕ್ಕೆ ಇಳಿದಿರುವುದೇ ದೊಡ್ಡ ವಿಷಯ ಎಂದು ಸಲ್ಲೂ ಪರ ವಕೀಲರು, ಆಪ್ತರು, ಬಂಧು ಮಿತ್ರರು ನಿಟ್ಟುಸಿರು ಬಿಟ್ಟಿದ್ದಾರೆ. [ರೇಷ್ಮಾ ಶೆಟ್ಟಿ , ಶೇರಾ ಕಂಡರೆ ಸಲ್ಮಾನ್ ಗೇಕೆ ಭಯ]
ಅದರೆ, ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಘಟನೆಯ ಪ್ರತ್ಯಕ್ಷ ಸಾಕ್ಷಿಗಳು, ಗಾಯಾಳುಗಳಾಗಿ ಚೇತರಿಸಿಕೊಂಡಿರುವ ಮನ್ನು ಖಾನ್, ಮೊಹಮ್ಮದ್ ಕಾಲಿಂ ಇಕ್ಬಾಲ್ ಪಠಾಣ್ ಹಾಗೂ ಮುಸ್ಲಿಂ ಶೇಖ್ ಅವರ ಸಲ್ಮಾನ್ ಜೈಲುಶಿಕ್ಷೆ ಬಗ್ಗೆ ನಮಗೆ ತಕರಾರಿಲ್ಲ. ನಮ್ಗೆ ಸರಿಯಾದ ಪರಿಹಾರ ಸಿಕ್ಕರೆ ಸಾಕು ಎಂದಿದ್ದಾರೆ.

ಸಂತ್ರಸ್ತರೆಲ್ಲ ಬೇಕರಿ ಸಿಬ್ಬಂದಿ
ಅಮೆರಿಕನ್ ಬೇಕರಿ ಮುಂದಿನ ಫುಟ್ ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಗಳು ಅಮೇರಿಕನ್ ಬೇಕರಿ ಸಿಬ್ಬಂದಿಯಾಗಿದ್ದರು. ಸಲ್ಮಾನ್ ಖಾನ್ ಕಾರಿನಿಂದ ಇಳಿದಾಗ ಕಣ್ಣಾರೆ ಕಂಡಿದ್ದಾರೆ. ಕೆಲವರು ಸಲ್ಮಾನ್ ಕಡೆಯಿಂದ ಬೆದರಿಕೆ ಬಂದಿದ್ದು ಎಂದು ಕೂಡಾ ಹೇಳಿದ್ದಾರೆ. ಸಲ್ಮಾನ್ ವಾಹನ ಚಲಾಯಿಸುತ್ತಿರಲಿಲ್ಲ ಎಂಬ ವಾದಕ್ಕೆ ವ್ಯತಿರಿಕ್ತ ಹೇಳಿಕೆಯನ್ನು ಸಾಕ್ಷಿಗಳು ನೀಡಿದ್ದರು.

ಕೋರ್ಟಿನಿಂದ ಪರಿಹಾರ ಸಿಕ್ಕಿದೆ
ಸೆಷನ್ಸ್ ಕೋರ್ಟಿನಲ್ಲಿ ಶಿಕ್ಷೆ ಪಡೆದ ಸಲ್ಮಾನ್ ಗೆ ಸಂಜೆ ವೇಳೆಗೆ ಬಾಂಬೆ ಹೈಕೋರ್ಟಿನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ಬಾಂಬೆ ಹೈಕೋರ್ಟ್ ಆದೇಶದಂತೆ ಮೃತನ ಕುಟುಂಬಕ್ಕೆ 10 ಲಕ್ಷ ರು ಹಾಗೂ ಗಾಯಗೊಂಡವರಿಗೆ 3 ಲಕ್ಷ ಹಾಗೂ 1.5 ಲಕ್ಷ ರು ನೀಡಿದ್ದರು.
|
ಅವರಿಗೆ ಶಿಕ್ಷೆ ನೀಡಿ ಏನು ಪ್ರಯೋಜನ
ಅವರಿಗೆ ಶಿಕ್ಷೆ ನೀಡಿ ಏನು ಪ್ರಯೋಜನ, ನಮಗೆ ಪರಿಹಾರ ಸಿಕ್ಕರೆ ಸಾಕು ಎಂದು ಒಬ್ಬ ಸಂತ್ರಸ್ತ ಮೊಹಮ್ಮದ್ ಶೇಖ್ ಹೇಳಿದ್ದಾರೆ.
| Array |
ಶಿಕ್ಷೆ ಪ್ರಮಾಣದಿಂದ ನಮಗೆ ಸಂತೋಷವಾಗಿದೆ
ಶಿಕ್ಷೆ ಪ್ರಮಾಣದಿಂದ ನಮಗೆ ಸಂತೋಷವಾಗಿದೆ ಎಂದು ಹೇಳಿದ ಸಂತ್ರಸ್ತ ಮಹಮ್ಮದ್ ಕಾಲಿಂ












Click it and Unblock the Notifications