ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಾರ್ಟರ್ಡ್ ವಿಮಾನ ಪತನಕ್ಕೆ ವಿಮಾನಯಾನ ಸಚಿವಾಲಯ ಹೊಣೆಯಲ್ಲ'

|
Google Oneindia Kannada News

ಮುಂಬೈ, ಜೂನ್ 29: ಮುಂಬೈಯಲ್ಲಿ ಐದು ಜನರನ್ನು ಬಲಿ ತೆಗೆದುಕೊಂಡ ಚಾರ್ಟರ್ಡ್ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

2018 ರವರೆಗೆ ಉತ್ತರ ಪ್ರದೇಶ ಸರ್ಕಾರದ ಅಡಿಯಲ್ಲಿದ್ದ ಈ ಫ್ಲೈಟ್ ಕೊನೆಯ ಬಾರಿ ಹಾರಿದ್ದೇ 2008 ರಲ್ಲಿ. ನಂತರ ಈ ವಿಮಾನವನ್ನು ಯುವಿ ಏವಿಯೇಶನ್ ಪ್ರೈವೇಟ್ ಲಿ. ಖರೀದಿ ಮಾಡಿತ್ತು. ಆದ್ದರಿಂದ ಇದು ಸರ್ಕಾರದ ವಿಮಾನವಲ್ಲ. ಇದಕ್ಕೆ ಭಾರತೀಯ ವಿಮಾನಯಾನ ಹೊಣೆಯಲ್ಲ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ಮುಂಬೈ: ವಸತಿ ಪ್ರದೇಶದ ಮೇಲೆ ಲಘು ವಿಮಾನ ಪತನ, 5 ಸಾವುಮುಂಬೈ: ವಸತಿ ಪ್ರದೇಶದ ಮೇಲೆ ಲಘು ವಿಮಾನ ಪತನ, 5 ಸಾವು

ಅದೂ ಅಲ್ಲದೆ, ಈ ವಿಮಾನಕ್ಕೆ ಯಾವುದೇ 'ಉಡ್ಡಯನ ಯೋಗ್ಯತಾ ಪತ್ರ'(airworthiness cirtificate) ಸಹ ಇರಲಿಲ್ಲ. ನಿಯಮಗಳ ಪ್ರಕಾರ ಯಾವುದೇ ವಿಮಾನ ಪರೀಕ್ಷಾರ್ಥ ಹಾರಾಟ ನಡೆಸುವ ವೇಳೆಯಲ್ಲೂ ಈ ಪತ್ರವನ್ನು ಸಂಬಂಧ ಪಟ್ಟ ಅಧಿಕಾರಿಗಳಿಂದ ಪಡೆಯಬೇಕು. ಆದರೆ ನಿನ್ನೆ ಅಪಘಾತಕ್ಕೊಳಗಾದ ಚಾರ್ಟರ್ಡ್ ವಿಮಾನ ಈ ಪತ್ರವನ್ನು ಪಡೆದಿರಲಿಲ್ಲ.

We are not responsible for Chartered plane crash in Mumbai: Aviation ministry

ನಿನ್ನೆ(ಜೂನ್ 29) ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದ ಜಾಗೃತಿ ಅಪಾರ್ಟ್ ಮೆಂಟ್‌ ಬಳಿ ವಿಮಾನ ಬಿದ್ದಿತ್ತು. ಬೀಳುವಾಗ ಕಟ್ಟಡಕ್ಕೆ ವಿಮಾನ ಡಿಕ್ಕಿಯಾದ ಕಾರಣ ಕಟ್ಟಡಕ್ಕೂ ಬೆಂಕಿ ತಗುಲಿತ್ತು. ಈ ಘಟನೆಯಲ್ಲಿ ಐವರು ಮೃತರಾಗಿದ್ದರೆ, ಹಲವರು ಗಾಯಗೊಂಡಿದ್ದರು.

English summary
The Ministry of Civil Aviation on Thursday said that the chartered plane that crashed in Mumbai killing five did not a have certificate of airworthiness. It does not belong to Government. So Aviation ministry said, they are not responsible for the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X