ವಿಡಿಯೋ: ಚಲಿಸುತ್ತಿರುವ ರೈಲಿನಲ್ಲಿ ನಿಮ್ಮ ಬ್ಯಾಗ್ ಹೇಗೆ ಕದೀತಾರೆ ನೋಡಿ
Recommended Video
ಮುಂಬೈ, ಜನವರಿ 17: ಪ್ರತಿನಿತ್ಯ ರೈಲಿನಲ್ಲಿ ಕಳ್ಳತನ ನಡೆಯುತ್ತಲೇ ಇರುತ್ತವೆ, ಕೆಲವರು ನೋಡ ನೋಡುತ್ತಿದ್ದಂತೆ ಬ್ಯಾಗುಗಳನ್ನು ದೋಚುತ್ತಾರೆ, ಇನ್ನೂ ಕೆಲ ಕಳ್ಳರು ಗೊತ್ತಿಲ್ಲದೆಯೇ ದೋಚುತ್ತಾರೆ.
ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯ ಬ್ಯಾಗ್ ಎಳೆದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುಣೆಯಿಂದ ಮುಂಬೈಗೆ ಹೊರಟಿದ್ದ ರೈಲಿನಲ್ಲಿ ಇನ್ನೇನು ರೈಲು ನಿಲ್ದಾಣ ಕೆಲವೇ ನಿಮಿಷಗಳಲ್ಲಿ ಬರುತ್ತದೆ ಎನ್ನುವಾಗ ಪ್ರಯಾಣಿಕರು ಬಾಗಿಲನ ಬಳಿ ಹೋಗಿ ನಿಂತಿದ್ದಾರೆ.
ಅದೇ ಸಂದರ್ಭ ನೋಡಿ ಕಳ್ಳನೊಬ್ಬ ರೈಲನ್ನೇರಿ ನೋಡನೋಡುತ್ತಿದ್ದಂತೆ ಬ್ಯಾಗನ್ನು ಎಳೆಯುತ್ತಾನೆ ಮಹಿಳೆಯು ಬ್ಯಾಗ್ ಉಳಿಸಿಕೊಳ್ಳಲು ಮುಂದಾದಾಗ ಆಕೆಯೂ ರೈಲಿನಿಂದ ಕೆಳಗೆ ಬೀಳಬೇಕು ಅಷ್ಟರಲ್ಲಿ ಸಹ ಪ್ರಯಾಣಿಕರೊಬ್ಬರು ಅವರನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಇಲ್ಲವಾದಲ್ಲಿ ಬ್ಯಾಗು ಕಳೆದುಕೊಂಡಿದ್ದಷ್ಟೇ ಅಲ್ಲ ಮಹಿಳೆಯ ಪ್ರಾಣಕ್ಕೂ ಅಪಾಯ ಎದುರಾಗುತ್ತಿತ್ತು.

ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ರೀತಿ ಪ್ಲಾಟ್‌ಫಾರಂ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅಥವಾ ರೈಲಿನ ಕಿಟಕಿ ಬಳಿ ಕೂರುವಾಗ, ರಾತ್ರಿ ಮಲಗುವಾಗ ನಿಮ್ಮ ಬ್ಯಾಗುಗಳ ಬಗ್ಗೆ ಎಚ್ಚರವಿರಲಿ.
Oneindia Kannada on Twitter
@rpfcr | @RailMinIndia | @PiyushGoyalOffc | @RailwaySeva | @_JAINMITESH https://t.co/Vh1RRBH2FR
ಕಳ್ಳರು ಕೇವಲ ಒಬ್ಬರೇ ಇರುವುದಿಲ್ಲ, ರೈಲಿನ ತುಂಬ ಅವರೆದ್ದೋ ತಂಡಗಳಿರುತ್ತವೆ. ಯಾರು ಕಳ್ಳರು ಯಾರು ಒಳ್ಳೆಯವರು ಎಂದು ಕಂಡು ಹಿಡಿಯುವುದು ಕಷ್ಟ. ಹಾಗಾಗಿ ನಿಮ್ಮ ಲಗೇಜ್‌ಗಳ ಬಗ್ಗೆ ಜಾಗ್ರತರಾಗಿರುವುದು ಒಳಿತು.
ಕೇವಲ ಬ್ಯಾಗ್‌ಗಳಷ್ಟೇ ಅಲ್ಲ ಮೊಬೈಲ್‌ಗಳನ್ನು ಕೂಡ ಹೀಗೆಯೇ ಕಳ್ಳತನ ಮಾಡುತ್ತಾರೆ.












Click it and Unblock the Notifications