ಅಲೋಕ್ ನಾಥ್ ವಿರುದ್ಧ ದೂರು ದಾಖಲಿಸಲಿರುವ ವಿನ್ತಾ ನಂದಾ
ಮುಂಬೈ, ಅಕ್ಟೋಬರ್ 17: ಹಿಂದಿ ನಟ ಅಲೋಕ್ ಅವರ ವಿರುದ್ಧ ಚಿತ್ರ ನಿರ್ಮಾಪಕಿ ಮತ್ತು ಬರಹಗಾರ್ತಿ ವಿನ್ತಾ ನಂದಾ ಅವರು ಮುಂಬೈಯ ಓಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ.
ಮೀಟೂ ಅಭಿಯಾನದ ಮೂಲಕ ಅಲೋಕ್ ನಾಥ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ವಿನ್ತಾ, ಇದೀಗ ಅಧಿಕೃತವಾಗಿ ದೂರು ನೀಡಲಿದ್ದಾರೆ.
ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ವಿನ್ತಾ ನಂದಾ ಅವರ ಮೇಲೆ ಈಗಾಗಲೇ 62 ವರ್ಷದ ಅಲೋಕ್ ನಾಥ್ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ, 'ಸಂಸ್ಕಾರಿ' ಎಂದೇ ಕರೆಸಿಕೊಂಡ ಅಲೋಕ್ ನಾಥ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ವಿನ್ತಾ ನಂದಾ ಇತ್ತೀಚೆಗಷ್ಟೇ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದರು. 19 ವರ್ಷಗಳ ಹಿಂದೆ ನಡೆದ ಘಟನೆಯನ್ನು ಮತ್ತೆ ಸ್ಮರಿಸಿಕೊಂಡಿದ್ದ ವಿನ್ತಾ, ಘಟಣೆಯ ವಿವರನ್ನು ನೀಡಿ, ಅಲೋಕ್ ನಾಥ್ ಅವರ ಮತ್ತೊಂದು ಮುಖವನ್ನು ಪರಿಚಯಿಸುತ್ತಿದ್ದೇನೆ ಎಂದಿದ್ದರು.
ವಿನ್ತಾ ನಂದ ಅವರ ನಂತರ ಮತ್ತೆ ಕೆಲವು ನಟಿಯರು ಅಲೋಕ್ ನಾಥ್ ವಿರುದ್ಧ ದನಿ ಎತ್ತಿದ್ದರು. ಆದರೆ ಇದುವರೆಗೂ ಆನ್ ಲೈನ್ ಅಭಿಯಾನಕ್ಕಷ್ಟೇ ಸೀಮತವಾಗಿದ್ದ ಈ ಹೋರಾಟ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕಾನೂನಾತ್ಮಕ ಪರಿಹಾರವನ್ನು ಬೇಡುತ್ತಿದೆ.












Click it and Unblock the Notifications