ನಟಿ ವಿದ್ಯಾ ಬಾಲನ್ ಅವರಿದ್ದ ಕಾರಿಗೆ ಅಪಘಾತ
ಮುಂಬೈ, ಸೆ. 29: ನಟಿ ವಿದ್ಯಾ ಬಾಲನ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಆದರೆ, ಕಾರಿಗೆ ಮಾತ್ರ ಹಾನಿಯಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಯಕ್ರಮಕ್ಕೆ ತೆರಳಿದ್ದ ನಟಿ ಬಾಂದ್ರಾ ಸಮೀಪ ವಾಹನವೊಂದು ವಿದ್ಯಾ ಬಾಲನ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡಿದಿದೆ. ಕಾರು ಜಖಂಗೊಂಡಿದೆ.

'ತುಮ್ಹಾರಿ ಸುಲು' ಚಿತ್ರದಲ್ಲಿ ರೇಡಿಯೋ ಜಾಕಿ ಪಾತ್ರದಲ್ಲಿ ನಟಿಸುತ್ತಿರುವ ವಿದ್ಯಾ ಅವರು ನವರಾತ್ರಿ ಸಮಾರಂಭವೊಂದಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications