ವಿಡಿಯೋ; ತೌಕ್ತೆ ಅಬ್ಬರ, ಸಾವಿನಿಂದ ಕ್ಷಣದಲ್ಲಿ ಬಚಾವಾದ ಮಹಿಳೆ
ಮುಂಬೈ, ಮೇ 18; ಮುಂಬೈನಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ ಸೋಮವಾರ ಭಾರೀ ಮಳೆಯಾಗಿದೆ. ಗಾಳಿಗೆ ಮರವೊಂದು ಮುರಿದು ಬಿದಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯೊಬ್ಬರು ಅಚ್ಚರಿಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
Recommended Video
ಮಹಿಳೆ ಸಾವಿನಿಂದ ಕ್ಷಣ ಮಾತ್ರದಲ್ಲಿ ಪಾರಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಂಗಳವಾರ ವೈರಲ್ ಆಗಿದೆ. ಮರ ಬೀಳುವ ಸಮಯದಲ್ಲಿ ಅದೇ ಜಾಗದಲ್ಲಿ ಹೋಗುತ್ತಿದ್ದ ಮಹಿಳೆ ತಕ್ಷಣ ವಾಪಸ್ ಆಗಿದ್ದಾರೆ, ಇದರಿಂದ ಜೀವ ಉಳಿದಿದೆ.
ಮುಂಬೈನ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ. ಸುರಿಯುವ ಮಳೆಯ ನಡುವೆಯೇ ಮಹಿಳೆ ಮಹಿಳೆ ಛತ್ರಿ ಹಿಡಿದು ಸಾಗುತ್ತಿದ್ದರು. ಆಗ ಗಾಳಿಯ ರಭಸಕ್ಕೆ ಮರ ಮುರಿದು ರಸ್ತೆಗೆ ಬಿದ್ದಿದೆ. ಮರ ಮುರಿಯುದನ್ನು ನೋಡಿದ ಮಹಿಳೆ ತಕ್ಷಣ ವಾಪಸ್ ಓಡಿ ಬಂದಿದ್ದಾರೆ.

ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮುಂಬೈ ನಗರದಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಮಂಗಳವಾರ ಸಹ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
#WATCH | Mumbai: A woman had a narrow escape when she managed to move away from the spot just in time as a tree uprooted and fell there. (17.05.2021)
— ANI (@ANI) May 18, 2021
Mumbai received heavy rain and wind yesterday in wake of #CycloneTauktae
(Source: CCTV footage) pic.twitter.com/hsYidntG7F
ಸೋಮವಾರ ಸುರಿದ ಮಳೆಗೆ ಮುಂಬೈನ ಪಾಲ್ಘಾರ್ ಪ್ರದೇಶದಲ್ಲಿ ಇಬ್ಬರು, ಥಾಣೆ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈನಲ್ಲಿ ಸೋಮವಾರ 114 ಕಿ. ಮೀ. ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದು, ಯಾರೂ ಸಹ ಸಮುದ್ರ ತೀರಕ್ಕೆ ಹೋಗಬಾರದು ಎಂದು ಶನಿವಾರದಿಂದಲೇ ಜನರಿಗೆ ಎಚ್ಚರಿಕೆ ನೀಡಲಾಗಿತ್ತು.












Click it and Unblock the Notifications