ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿದ್ದಾರೆ ಜೋ ಬೈಡನ್ ದೂರದ ಸಂಬಂಧಿಕರು

|
Google Oneindia Kannada News

ನಾಗಪುರ, ನವೆಂಬರ್ 11: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರ ವಿವಿಧ ಇಲಾಖೆಗಳಲ್ಲಿ ಭಾರತ ಮೂಲದ ಅಧಿಕಾರಿಗಳಿಗೆ ಸ್ಥಾನ ದೊರಕಿದೆ. ಸ್ವತಃ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ತಾಯಿಯ ಮೂಲ ಭಾರತ. ಇದರ ಜತೆಗೆ ಬೈಡನ್ ಅವರಿಗೂ ಭಾರತಕ್ಕೂ 'ದೂರದ' ನಂಟು ಇದೆ.

ಜೋ ಬೈಡನ್ ಅವರ ದೂರದ ಸಂಬಂಧಿಕರು ಭಾರತದಲ್ಲಿ ನೆಲೆಸಿದ್ದಾರೆ. ಅವರ ಬಗ್ಗೆ ಬೈಡನ್ 2013 ಮತ್ತು 2015ರಲ್ಲಿ ಪ್ರಸ್ತಾಪಿಸಿದ್ದರು. ಈ ಸಂಬಂಧಿಕರು 1873ರಿಂದಲೂ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ನೆಲೆಸಿದ್ದಾರೆ.

ಜೋ ಬೈಡನ್ ಪರಾಮರ್ಶನಾ ತಂಡಗಳಲ್ಲಿ ಭಾರತ ಮೂಲದ 20 ಮಂದಿಗೆ ಸ್ಥಾನಜೋ ಬೈಡನ್ ಪರಾಮರ್ಶನಾ ತಂಡಗಳಲ್ಲಿ ಭಾರತ ಮೂಲದ 20 ಮಂದಿಗೆ ಸ್ಥಾನ

2013ರಲ್ಲಿ ಅಮೆರಿಕ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬೈಡನ್, ತಮ್ಮ ದೂರದ ಸಂಬಂಧಿಕರು ಮಹಾರಾಷ್ಟ್ರದಲ್ಲಿ ಇದ್ದಾರೆ ಎಂದು ಹೇಳಿದ್ದರು. 2013ರಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮ ಮತ್ತು 2015ರಲ್ಲಿ ವಾಷಿಂಗ್ಟನ್‌ನಲ್ಲಿ ಈ ಬಗ್ಗೆ ಅವರು ಪ್ರಸ್ತಾಪಿಸಿದ್ದರು. 1972ರಲ್ಲ ತಾವು ಸೆನೆಟರ್ ಆದಾಗ ಭಾರತದ ಬೈಡನ್‌ರಿಂದ ಪತ್ರವೊಂದು ಬಂದಿತ್ತು. ಇದರಿಂದಾಗಿ ತಮ್ಮ 'ದೊಡ್ಡ, ದೊಡ್ಡ, ದೊಡ್ಡ, ದೊಡ್ಡ, ದೊಡ್ಡಜ್ಜ' ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿತ್ತು ಎಂದಿದ್ದರು ಎಂದು ಪಿಟಿಐ ವರದಿ ಮಾಡಿದೆ. ಮುಂದೆ ಓದಿ.

ನಾಗಪುರದಲ್ಲಿ ಬೈಡನ್ ಕುಟುಂಬ

ನಾಗಪುರದಲ್ಲಿ ಬೈಡನ್ ಕುಟುಂಬ

ಈ ಪತ್ರವನ್ನು ನಾಗಪುರ ಮೂಲದ ಲೆಸ್ಲೀ ಬೈಡನ್ ಅವರು ಬರೆದಿದ್ದರು. ನಾಗಪುರದಲ್ಲಿ ನೆಲೆಸಿರುವ ಮೊಮ್ಮಕ್ಕಳು, ತಮ್ಮ ಕುಟುಂಬ 1973ರಿಂದ ಅಲ್ಲಿ ನೆಲೆಸಿದೆ ಎಂದು ಹೇಳಿಕೊಂಡಿದ್ದಾರೆ. ಲೆಸ್ಲೀ ಅವರ ಮೊಮ್ಮಗಳು ಸೋನಿಯಾ ಬೈಡನ್ ಫ್ರಾನ್ಸಿಸ್ ನಾಗಪುರದಲ್ಲಿ ಮನೋವೈದ್ಯೆಯಾಗಿದ್ದಾರೆ. 'ಬೈಡನ್ಸ್ ನಾಗಪುರದಲ್ಲಿದ್ದಾರೆ, ಎಲ್ಲೆಡೆಯೂ ಇದ್ದಾರೆ' ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವಿಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯಿಂದ ಸಿಕ್ಕ ನಂಟು

ಪತ್ರಿಕೆಯಿಂದ ಸಿಕ್ಕ ನಂಟು

ಲೆಸ್ಲೀ ಬೈಡನ್ ಅವರು ನಾಗಪುರದಲ್ಲಿ ನೆಲೆಸಿದ್ದರು. ಅವರು ಭಾರತ್ ಲಾಡ್ಜ್ ಮತ್ತು ಹಾಸ್ಟೆಲ್ ಹಾಗೂ ಭಾರತ್ ಕೆಫೆಯ ಮ್ಯಾನೇಜರ್ ಆಗಿದ್ದರು. 1983ರಲ್ಲಿ ಅವರು ಮೃತಪಟ್ಟಿದ್ದರು. 1983ರಲ್ಲಿ ಇಲ್ಲುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ವಾರ ಪತ್ರಿಕೆಯ ಮಾರ್ಚ್ 28-ಏಪ್ರಿಲ್ 4ರ ಸಂಚಿಕೆ ಓದುವಾಗ ಲೆಸ್ಲೀ ಅವರು ಆಗಿನ ಅಮೆರಿಕ ಸೆನೆಟರ್ ಜೋ ಬೈಡನ್ ಕುರಿತು ಲೇಖನವನ್ನು ಗಮನಿಸಿದ್ದರು.

ಟ್ರಂಪ್ ಹಠದ ನಡುವೆಯೂ ಸ್ಥಿತ್ಯಂತರ ಆರಂಭ: ಜೋ ಬೈಡನ್ಟ್ರಂಪ್ ಹಠದ ನಡುವೆಯೂ ಸ್ಥಿತ್ಯಂತರ ಆರಂಭ: ಜೋ ಬೈಡನ್

ಪೂರ್ವಜರ ಬಗ್ಗೆ ಚರ್ಚಿಸಿದ್ದರು

ಪೂರ್ವಜರ ಬಗ್ಗೆ ಚರ್ಚಿಸಿದ್ದರು

'1981ರ ಏಪ್ರಿಲ್ 15ರಂದು ಪತ್ರ ರವಾನಿಸುವ ಮೂಲಕ ಲೆಸ್ಲೀ ಬೈಡನ್ ಅವರು ಜೋ ಬೈಡನ್ ಅವರೊಂದಿಗೆ ಸಂಪರ್ಕ ಪಡೆದುಕೊಂಡಿದ್ದರು. 1981ರ ಮೇ 30ರಂದು ಜೋ ಬೈಡನ್, ಲೆಸ್ಲೀ ಅವರಿಗೆ ಪತ್ರ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಭಾರತದಿಂದ ಪತ್ರ ಬಂದಿದ್ದರ ಬಗ್ಗೆ ಸಂತಸ ಹಂಚಿಕೊಂಡಿದ್ದ ಅವರು, ಬೈಡನ್ಸ್ ವಂಶಾವಳಿ ಬಗ್ಗೆ ಚರ್ಚಿಸಿದ್ದರು' ಎಂದು ಸೋನಿಯಾ ವಿವರಿಸಿದ್ದಾರೆ.

ಸೋನಿಯಾ ಅವರ ಅಣ್ಣ ಇಯಾನ್ ಬೈಡನ್ (44) ವ್ಯಾಪಾರಿ ಹಡಗೊಂದರಲ್ಲಿ ನಾವಿಕರಾಗಿದ್ದರು. ಅವರು ಕೂಡ ನಾಗಪುರದಲ್ಲಿ ನೆಲೆಸಿದ್ದಾರೆ. ಲೆಸ್ಲೀ ಮತ್ತು ಜೋ ಬೈಡನ್ ತಮ್ಮ ಪೂರ್ವಜ ಜಾನ್ ಬೈಡನ್ ಮತ್ತು ಅವರ ಪತ್ನಿ ಅನ್ನೆ ಬೀಮೌಂಟ್ ಬಗ್ಗೆ ಚರ್ಚಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ನಂತರ ಪತ್ರ ವ್ಯವಹಾರ ನಡೆದಿರಲಿಲ್ಲ

ನಂತರ ಪತ್ರ ವ್ಯವಹಾರ ನಡೆದಿರಲಿಲ್ಲ

'ಲೆಸ್ಲೀ ಮತ್ತು ಜೋ ಬೈಡನ್ ಅವರು ಪತ್ರ ವ್ಯವಹಾರ ನಡೆಸಿದ್ದಕ್ಕೆ ಪರಸ್ಪರ ಕೃತಜ್ಞತೆ ಸಲ್ಲಿಸಿದ್ದರು. ಹಾಗೆಯೇ ಸಂಪರ್ಕ ಮುಂದುವರಿಸುವುದಾಗಿ ಹೇಳಿಕೊಂಡಿದ್ದರು. ಆದರೆ 1983ರಲ್ಲಿ ಲೆಸ್ಲೀ ಬೈಡನ್ ಅವರ ಆರೋಗ್ಯ ಹದಗೆಟ್ಟು ನಾಗಪುರದಲ್ಲಿ ಮೃತಪಟ್ಟರು. ಲೆಸ್ಲೀ ಅವರ ಪತ್ನಿಗೆ ಕುಟುಂಬದ ವಂಶಾವಳಿಯ ನಂಟು ಬೆಸೆಯುವುದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ' ಎಂದು ಮತ್ತೊಬ್ಬ ಮೊಮ್ಮಗಳು ರೊವೆನಾ ತಿಳಿಸಿದ್ದಾರೆ.

ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!ಶ್‌..! ಇದು ಬೈಡನ್ ಜಮಾನ, ಬದಲಾಗಲಿದೆ ಅಮೆರಿಕ..!

ಮೊಮ್ಮಗನ ಮದುವೆಗೆ ಸೇರಿದ್ದ ಕುಟುಂಬ

ಮೊಮ್ಮಗನ ಮದುವೆಗೆ ಸೇರಿದ್ದ ಕುಟುಂಬ

ಲೆಸ್ಲೀ ಬೈಡನ್ ಮತ್ತು ಜೋ ಬೈಡನ್ ನಡುವೆ ನಡೆದ ಪತ್ರ ವ್ಯವಹಾರಗಳಿಗೆ ಸಾಕ್ಷಿಯನ್ನು ಕೂಡ ಅವರ ಮೊಮ್ಮಕ್ಕಳು ತೋರಿಸಿದ್ದಾರೆ. ನಾಗಪುರ, ಮುಂಬೈ, ನ್ಯೂಜಿಲ್ಯಾಂಡ ಮತ್ತು ಅಮೆರಿಕಗಳಲ್ಲಿ ನೆಲೆಸಿರುವ ಬೈಡನ್ ಕುಟುಂಬದವರು 2018ರಲ್ಲಿ ಲೆಸ್ಲೀ ಬೈಡನ್ ಅವರ ಮೊಮ್ಮಗ ಲೆಸ್ಲೀ ಡೇವಿಡ್ ಬೈಡನ್ ಮದುವೆ ವೇಳೆ ಸೇರಿಕೊಂಡಿದ್ದರು.

ಭಾರತದಲ್ಲಿ ನೆಲೆಸಿದ್ದರು

ಭಾರತದಲ್ಲಿ ನೆಲೆಸಿದ್ದರು

'ನನ್ನ ದೊಡ್ಡ ದೊಡ್ಡ ದೊಡ್ಡ ದೊಡ್ಡ ದೊಡ್ಡಜ್ಜ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕ್ಯಾಪ್ಟನ್ ಆಗಿದ್ದರು. ನಿವೃತ್ತಿ ಬಳಿಕ ಅವರು ಭಾರತದಲ್ಲಿಯೇ ನೆಲೆಸಲು ನಿರ್ಧರಿಸಿ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದರು. ಮುಂಬೈನಲ್ಲಿ ಐವರು ಬೈಡನ್‌ಗಳಿದ್ದಾರೆ. ಯಾರೋ ನನಗೆ ಅವರ ಫೋನ್ ನಂಬರ್ ಕೊಟ್ಟಿದ್ದಾರೆ. ಅವರಿಗೆ ಇನ್ನೂ ಕರೆ ಮಾಡಿಲ್ಲ. ಆದರೆ ಮಾಡುವ ಆಲೋಚನೆಯಿದೆ' ಎಂದು 2015ರಲ್ಲಿ ವಾಷಿಂಗ್ಟನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬೈಡನ್ ಹೇಳಿದ್ದರು.

English summary
US Elections: President elect Joe Biden's some distant relatives are living in Nagpur since 1873. Joe had contact with Leslie Biden who died in 1983.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X