ಗೋಪಿನಾಥ್ ಮುಂಡೆ ಸಾವು: ಇದೇನಿದು ಶೋಭಾಡೆ ಸಂಸ್ಕಾರ?
ಮುಂಬೈ, ಜೂನ್ 3: ಕೇಂದ್ರ ಸಚಿವ ಗೋಪಿನಾಥ್ ಮುಂಡೆ (64) ಅವರ ಅಕಾಲಿಕ ಸಾವಿನಿಂದ ದೇಶದ ರಾಜಕೀಯ ನಾಯಕರು ಶೋಕ ಸಾಗರದಲ್ಲಿ ಮುಳುಗಿರುವಾಗ ಶೋಭಾ ಡೆ ಎಂಬ ಖ್ಯಾತ ಲೇಖಕಿ/ ಮಾಜಿ ಪತ್ರಕರ್ತೆ ಗೋಪಿನಾಥ್ ಮುಂಡೆ ಸಾವಿನ ಬಗ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಅಪಹಾಸ್ಯ ಮಾಡಿದ್ದಾರೆ.
ಸೂಕ್ಷ್ಮತೆಯನ್ನು ಕಳೆದುಕೊಂಡು ಶೋಭಾ ಡೆ ಅವರು ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಸಾವಿನ ಬಗ್ಗೆ ಕಂಬನಿಗರೆಯುತ್ತಾ ಹೀಗೆ ಟ್ವೀಟ್ ಮಾಡಿದ್ದಾರೆ: 'ಮುಂಡೆ ಸಾವು ಆಘಾತಕಾರಿ. ಮುಂಡೆ ಕುಟುಂಬಕ್ಕೆ ಕೆಟ್ಟ ದಿನಗಳು ಬಂದಿವೆ' ಎಂದಿದ್ದಾರೆ. (ಕಾರು ಅಪಘಾತದಲ್ಲಿ ಕೇಂದ್ರ ಸಚಿವ ಮುಂಡೆ ಸಾವು)

ಹಿಂದಿನಿಂದಲೂ ವಿವಾದಕ್ಕೀಡಾಗುವುದನ್ನೇ ಕಾಯಕವಾಗಿಸಿಕೊಂಡಿರುವ ಒಂದು ಕಾಲದ ಫ್ಯಾಷನ್ ತಜ್ಞೆ, 66 ವರ್ಷದ ಮುಂಬೈ ಮೂಲದ ಶೋಭಾ ಡೆ (Shobha Rajadhyaksha) ಇದೀಗ ಮುಂಡೆ ಸಾವಿನ ಸಂದರ್ಭದಲ್ಲೂ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷದ ಅಚ್ಚೆ ದಿನ್ ಆ ಗಯಾ (Acche din aa gaya) ಘೋಷ ವಾಕ್ಯವನ್ನು ಅಣಕಿಸುವಂತೆ ಶೋಭಾ ಡೆ ಅವರು ಮುಂಡೆ ಸಾವಿನಿಂದ ಅವರ ಕುಟುಂಬಕ್ಕೆ ಕೆಟ್ಟ ದಿನಗಳು ಬಂದಿವೆ ಎಂದಿದ್ದಾರೆ. ಶೋಭಾ ಡೆ ಅವರ ಈ ಟ್ವೀಟ್ ಬಗ್ಗೆ ವ್ಯಾಪಕ ಟೀಕೆಗಳು ಹರಿದುಬರುತ್ತಿವೆ.
ಶೋಭಾ ಡೆ ಟ್ವೀಟ್ ಹೀಗಿದೆ:
Shocking news about Munde's death. How tragic.R.I.P. Burrey din aa gaye for the family.Deepest condolences.
— Shobhaa De (@DeShobhaa) June 3, 2014 











Click it and Unblock the Notifications