1 Above ಹೋಟೆಲ್ ಅಗ್ನಿ ದುರಂತ: ಇಬ್ಬರು ಮ್ಯಾನೇಜರ್ ಗಳ ಬಂಧನ

ಮುಂಬೈ, ಜನವರಿ 01: 2017ರ ಅಂತ್ಯದಲ್ಲಿ ಬೆಚ್ಚಿಬೀಳಿಸಿದ್ದ ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿರುವ 1 Above ಹೋಟೆಲಿನಲ್ಲಿ ಸಂಭವಿಸಿದ್ದ ಭಾರೀ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ನ ಇಬ್ಬರು ಮ್ಯಾನೇಜರ್ ಗಳನ್ನು ಬಂಧಿಸಲಾಗಿದೆ.

ಗುರುವಾರ ರಾತ್ರಿ (ಡಿಸೆಂಬರ್ 29) ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿರುವ 1 Above ಹೋಟೆಲ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 14ಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಇದರ ತನಿಖೆ ನಡೆಸಿದ ಮುಂಬೈ ಪೊಲೀಸರು ಹೋಟೆಲ್ ನ ಇಬ್ಬರು ಮ್ಯಾನೇಜರ್ ಗಳನ್ನು ಸೋಮವಾರ ಬಂಧಿಸಿದ್ದಾರೆ

Two managers of '1-Above' hotel arrested in connection with Kamala Mills Fire tragedy in Mumbai

ಹೋಟೆಲಿನ ಮೂರನೇ ಮಹಡಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಖುಷಬೂ ಎಂಬ ಮಹಿಳೆ ಸೇರಿದಂತೆ ಹೆಚ್ಚಿನವರು ಮಹಿಳೆಯರೇ ದುರಂತದಲ್ಲಿ ಮೃತಪಟ್ಟಿದ್ದರು.

ಹೋಟೆಲ್ ನಲ್ಲಿ ಸರಿಯಾದ ವೆಂಟಿಲೇಶನ್ ಮತ್ತು ತುರ್ತು ನಿರ್ಗಮನ ಸೇರಿದಂತೆ ಇತರೆ ಯಾವುದೇ ವ್ಯವಸ್ಥೆಗಳಿರಲಿಲ್ಲ. ಇದು ಕಾನೂನು ಬಾಹಿರವಾಗಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+